ವೆಂಕಟ್ ಮತ್ತು ಡಿಕ್ಟೇಟಕ್ ಹುಚ್ಚಾ ವೆಂಕಟ್ ಚಿತ್ರದ ನಾಯಕಿ ಐಶ್ವರ್ಯಾ 
ಸಿನಿಮಾ ಸುದ್ದಿ

ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಮತ್ತೊಂದು ಮದುವೆ, ಹುಡುಗಿ ಯಾರು ಗೊತ್ತಾ?

ಯೂಟ್ಯೂಬ್ ಸ್ಟಾರ್, ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಮತ್ತೊಂದು ಮದುವೆಯಾಗಿದ್ದು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಗೊಳಿಸಿದ್ದಾರೆ.

ಬೆಂಗಳೂರು: ಯೂಟ್ಯೂಬ್ ಸ್ಟಾರ್, ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಮತ್ತೊಂದು ಮದುವೆಯಾಗಿದ್ದು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಗೊಳಿಸಿದ್ದಾರೆ.
ಹೌದು.. ಈ ಹಿಂದೆ ರಿಯಾಲಿಟಿ ಷೋವೊಂದರ ಸಹಸ್ಪರ್ಧಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಆತ್ಮಹತ್ಯೆಗೆ ಪ್ರಯತ್ನಿಸಿ ದೊಡ್ಡ ಸುದ್ದಿಯಾಗಿದ್ದ ಹುಚ್ಚಾ ವೆಂಕಟ್ ಇದೀಗ ಅದನ್ನೆಲ್ಲಾ ಮರೆತು ಮತ್ತೊಂದು ಮದುವೆಯಾಗಿದ್ದಾರಂತೆ. ಹುಚ್ಚಾ ವೆಂಕಟ್ ಕಳೆದ ವಾರ ತಲಕಾವೇರಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದಾರೆ.. ಆದರೆ ಉಭಯ ಕುಟುಂಬಸ್ಥರಿಗೆ ಈ ಬಗ್ಗೆ ಮಾಹಿತಿ ಇಲ್ಲ, ಅಲ್ಲದೆ ಕಾರಣಾಂತರಗಳಿಂಗ ಮದುವೆ ವಿಚಾರ ರಹಸ್ಯವಾಗಿಟ್ಟಿದ್ದೆ ಎಂದು ಹುಚ್ಚಾ ವೆಂಕಟ್ ಹೇಳಿದ್ದಾರೆ.
ಲೈವ್ ನಲ್ಲಿ ವೆಂಕಟ್ ಹೇಳಿದ್ದೇನು?
ತಾವು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ಫೇಸ್ ಬುಕ್ ಲೈವ್ ಗೆ ಬಂದು 'ವಿವಾಹ'ದ ಬಗ್ಗೆ ಮಾಹಿತಿ ನೀಡಿದ್ದಾರೆ ಹುಚ್ಚ ವೆಂಕಟ್. 'ಕಳೆದ ವಾರ ತಲಕಾವೇರಿಯಲ್ಲಿ ಐಶ್ವರ್ಯ ಎಂಬುವರನ್ನ ನಾನು ಮದುವೆ ಆದೆ. ಅದಾದ್ಮೇಲೆ, ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹೀಗಾಗಿ ಮದುವೆ ಆದ ವಿಷಯವನ್ನ ನಾವು ಮನೆಯವರಿಂದ ಮುಚ್ಚಿಚ್ಚಿದ್ದೆವು. ನಾನು ನಟಿಸಿ, ನಿರ್ದೇಶನ ಮಾಡಿರುವ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್ ಈ ಐಶ್ವರ್ಯ ಎಂದು ವೆಂಕಟ್ ಹೇಳಿದ್ದಾರೆ. 
''ನಾವು ಪ್ರೀತಿಸಿ ಮದುವೆ ಆಗಿದ್ದು, ಮನೆಯಲ್ಲಿ ವಿರೋಧ ಇದ್ದೇ ಇದೆ. ಐಶ್ವರ್ಯ ಬೇರೆ ಯಾರೂ ಅಲ್ಲ. 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್. ಮದುವೆ ಆದ್ಮೇಲೆ, ಮನೆಯವರ ಆಶೀರ್ವಾದ ತೆಗೆದುಕೊಳ್ಳಲು ಫೋನ್ ಮಾಡಿದಾಗ ದೊಡ್ಡಮ್ಮ ತೀರಿಕೊಂಡ ವಿಚಾರ ತಿಳಿಯಿತು. ಹೀಗಾಗಿ ಮದುವೆ ವಿಷಯ ಹೇಳುವುದು ಬೇಡ ಅಂದುಕೊಂಡೆವು ಎಂದು ವೆಂಕಟ್ ಹೇಳಿದ್ದಾರೆ.  ಅಂತೆಯೇ 'ಮದುವೆ ಆಗಿ ಇಬ್ಬರೂ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನ ಚೆನ್ನಾಗಿ ನೋಡಿಕೊಳ್ತೀನಿ. ನಾನು ಅವಳನ್ನ ಬಹಳ ಪ್ರೀತಿಸುತ್ತೇನೆ. ಅವಳು ನನ್ನನ್ನ ಪ್ರೀತಿಸುತ್ತಾಳೆ. ನಾವು ತಪ್ಪು ಮಾಡಿಲ್ಲ. ಇಬ್ಬರೂ ಪ್ರೀತಿಸಿ ಮದುವೆ ಆಗಿರೋದು. ನಾವಿಬ್ಬರೂ ಮೇಜರ್. ಬಲವಂತವಾಗಿ ಮದುವೆ ಆಗಿಲ್ಲ. ನಮ್ಮಿಬ್ಬರನ್ನೂ ದೂರ ಮಾಡಬೇಡಿ'' ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ. 
ಅಂತೆಯೇ ಪೊಲೀಸ್ ಆಯುಕ್ತರಿಗೂ ಮನವಿ ಮಾಡಿರುವ ವೆಂಕಟ್ ತಮಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಹಿಂದೆ ನಟಿ ರಮ್ಯಾ ಅವರನ್ನು ಮದುವೆಯಾಗಿರುವುದಾಗಿ ಹೇಳಿ ರಾತ್ರೋ ರಾತ್ರಿ ಸುದ್ದಿಯಾಗಿದ್ದ ನಟ ಹುಚ್ಚಾ ವೆಂಕಟ್, ಬಳಿಕ ತಮ್ಮ ವಿಡಿಯೋಗಳ ಮೂಲಕ ಅಭಿಮಾನಿಗಳ ಸಂಪಾದಿಸಿದ್ದರು. ಇನ್ನು ಇದೇ ವೆಂಕಟ್, 2007 ಜನವರಿ 3 ರಂದು ರೇಷ್ಮಾ ಎನ್ನುವವರ ಜೊತೆ ಸಂಪಂಗಿರಾಮನಗರದ ಗಣಪತಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಬಳಿಕ ರೇಷ್ಮಾ ಏನಾದರು.? ಎಂಬುದರ ಬಗ್ಗೆ ಮಾಹಿತಿ ಇಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT