ರಾಂಬೊ 2 ಚಿತ್ರ ತಂಡ 
ಸಿನಿಮಾ ಸುದ್ದಿ

'ರಾಂಬೊ 2'ಗೆ ನನ್ನನ್ನೇ ಪೂರ್ತಿಯಾಗಿ ತೊಡಗಿಸಿಕೊಂಡೆ: ತರುಣ್ ಸುಧೀರ್

ಚುನಾವಣೆ ಮುಗಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಅನೇಕ ದೊಡ್ಡ ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ದವಾಗಿವೆ. ಬಹು ನಿರೀಕ್ಷಿತ ರ‍್ಯಾಂಬೋ-2 ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಅನುಮತಿ ದೊರಕಿದ್ದು, ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ.

ಚುನಾವಣೆ ಮುಗಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ  ಅನೇಕ ದೊಡ್ಡ ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ದವಾಗಿವೆ. ಬಹು ನಿರೀಕ್ಷಿತ ರ‍್ಯಾಂಬೋ-2   ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಅನುಮತಿ ದೊರಕಿದ್ದು, ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ.

ರ‍್ಯಾಂಬೋ-2 ಚಿತ್ರವನ್ನು ಅನಿಲ್ ಕುಮಾರ್  ನಿರ್ದೇಶಿಸಿದ್ದು, ಶರಣ್ ಹಾಗೂ ಅಶಿಕಾ ರಂಗನಾಥ್ ನಾಯಕ ನಟ, ನಟಿಯಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಂತ್ರಜ್ಞರು ಹಾಗೂ ಕಲಾವಿದರ ಹೊಂದಾಣಿಕೆ ಈ ಚಿತ್ರ ತಯಾರಿಕೆಯ ಪ್ರಮುಖ ಅಂಶವಾಗಿದೆ.

ಶರಣ್ ಹಾಗೂ ಹಾಸ್ಯನಟ ಚಿಕ್ಕಣ್ಣ ಅವರ ಮಾಲೀಕತ್ವದ  ಲ್ಯಾಡೊ ಸಿನಿಮಾ ಬ್ಯಾನರ್ ಅಡಿಯಲ್ಲಿ  ಈ ಚಿತ್ರ ತಯಾರಿಸಲಾಗಿದ್ದು, ನಿರ್ದೇಶಕ ತರುಣ್ ಸುಧೀರ್,  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಹಕ ಸುಧಾಕರ್ ಎಸ್. ರಾಜ್,  ಮತ್ತಿತರರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

 ಹಿರೋಹಿನ್ ಅಶಿಕಾ, ಛಾಯಾಗ್ರಾಹಕರನ್ನು ಹೊರತುಪಡಿಸಿದ್ದರೆ, ಉಳಿದ ಇದೇ ತಂಡ  2012ರಲ್ಲಿ ಬಿಡುಗಡೆಯಾಗಿದ್ದ  ರ‍್ಯಾಂಬೋ ಚಿತ್ರದಲ್ಲಿತ್ತು. ಈ ಚಿತ್ರ ಕುರಿತಂತೆ ತರುಣ್ ಸುಧೀರ್  ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದಾರೆ.



 ತಂತ್ರಜ್ಞ, ನಟ, ನಿರ್ಮಾಪಕರಾಗಿ ಬದಲು ಆದಾಗ
ತಂತ್ರಜ್ಞರು, ನಟರು, ನಿರ್ಮಾಪಕರಾಗಿ ಬದಲಾವಣೆಗೊಂಡಾಗ, ಬಜೆಟ್ ಬಗ್ಗೆ ಯಾವುದೇ ನಿರ್ಮಾಪಕರನ್ನು  ಒಪ್ಪಿಸುವುದಿಲ್ಲ. ಏನೂ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಸಂಪೂರ್ಣ ಅರಿವು ಇರುತ್ತದೆ. ತೆರೆ ಮೇಲೆ ಏನು ತೋರಿಸಬೇಕೆಂಬ ಎಂಬುದರ ಬಗ್ಗೆ ಅಷ್ಟೇ ಗಮನ ಕೇಂದ್ರಿಕರಿಸುತ್ತೇವೆ. ಬಹಳಷ್ಟು ಜವಾಬ್ದಾರಿ ಬರುತ್ತದೆ.  ಇತರ ಸಿನಿಮಾಗಳ ನಿರ್ಮಾಪಕರು ಏಲ್ಲಿ ಹಣ ಕಳೆದುಕೊಂಡರು ಎಂಬ ಬಗ್ಗೆ ಯೋಚಿಸುತ್ತೇವೆ. ವಾಸ್ತವಿಕತೆ ತಕ್ಕಂತೆ ಸಿನಿಮಾ ಮಾಡಲು ಹೋರಾಟ ನಡೆಸುತ್ತೇವೆ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಅದಕ್ಕಾಗಿ ಹಣ ನೀಡುತ್ತೇವೆ. ಈಗ ಹೂಡಿಕೆದಾರ, ನಿರ್ಮಾಪಕನ ಬಗ್ಗೆ ಮಾತ್ರ ಆಲೋಚನೆ ಹೆಚ್ಚಾಗಿದೆ.

'ಹೃದಯ ಮತ್ತು ಆತ್ಮವು ರಾಂಬೊ 2 ಅನ್ನು ತಯಾರಿಸಿದೆ
 ರಾಂಬೊ 2 ಚಿತ್ರ ಮಾಡುವಾಗ ವ್ಯವಹಾರದ ಉದ್ದೇಶವಿರಲಿಲ್ಲ. ವೀಕ್ಷಕರು ಚಿತ್ರವನ್ನು ವೀಕ್ಷಿಸುತ್ತಾರೆ ಅನ್ನಿಸಿದಾಗ  ಚಿತ್ರ ನಿರ್ಮಿಸಲು ಮುಂದಾದ್ದೆ, ನಮ್ಮ ಕೆಲಸದಲ್ಲಿ ಹಣ ನೋಡುವುದಿಲ್ಲ. ಬಾಕ್ಸ್ ಆಫೀಸ್ ಫಲಿತಾಂಶಗಳ ಹೊರತಾಗಿಯೂ, ನಾವು ಈ ಚಲನಚಿತ್ರದ ಬಗ್ಗೆ ಹೆಮ್ಮೆಪಡುತ್ತೇವೆ. ಈ ಚಿತ್ರಕ್ಕಾಗಿ ಬಹಳಷ್ಟು ಸಮಯ ಹಾಗೂ ಹಣವನ್ನು ವೆಚ್ಚ ಮಾಡಿದ್ದೇವೆ. ಜನರು ಇಷ್ಟಪಡಲೀ ಅಥವಾ ಬಿಡಲೀ ಯಾರೊಬ್ಬರೂ ತಮ್ಮ ಪ್ರಯತ್ನವನ್ನು ಲೆಕ್ಕ ಹಾಕುವುದಿಲ್ಲ.

ನಂಬಿಕೆ ಆಧಾರಿತ ಚಿತ್ರ
ತಂತ್ರಜ್ಞರೊಂದಿಗೆ ಶರಣ್ ಉತ್ತಮ  ಕೆಲಸದ ಸಂಬಂಧ ಹೊಂದಿದ್ದಾರೆ. ಆತನ ಶೈಲಿಯನ್ನು ಅವರು ಕೂಡಾ ಅರ್ಥ ಮಾಡಿಕೊಳ್ಳುತ್ತಾರೆ. ವ್ಯವಹಾರಿಕ ದೃಷ್ಟಿಯಿಂದಲೇ ಈ ಚಿತ್ರ ನಿರ್ಮಿಸಿಲ್ಲ. ನಂಬಿಕೆ ಆಧಾರದ ಮೇಲೆ ಕೆಲಸ ಮಾಡಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ತಂತ್ರಜ್ಞರು ಮತ್ತು ನಿರ್ಮಾಪಕರು,  ನಟ ಮತ್ತು ಚಿತ್ರದ ಕಡೆಗೆ ಅದೇ ರೀತಿ ಭಾವಿಸುತ್ತಾರೆ ಎಂಬುದನ್ನು ನೋಡಲು ಇದು ಉತ್ತಮವಾಗಿದೆ.

 ಶರಣ್  ವೃತ್ತಿಜೀವನದ ಉತ್ತೇಜನದ ಅಗತ್ಯವಿಲ್ಲ
ನಾಯಕ ನಟನ ಭವಿಷ್ಯದ ಮೇಲೆ ಸಿನಿಮಾ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಟರಾಗಿ ಶರಣ್ ಗೆ ವೃತ್ತಿಜೀವನದ ಉತ್ತೇಜನ   ಅಗತ್ಯವಿಲ್ಲ. ಯಶಸ್ಸು ಮತ್ತು ವಿಫಲತೆ ಪ್ರತಿಯೊಬ್ಬರ ನಟರ ಜೀವನದ ಅಂಗಗಳಾಗಿವೆ.  ವಿರಾಟ್ ಕೊಹ್ಲಿ ತಂಡ ಮೇಲೆ ಪ್ರತಿಯೊಬ್ಬರು ಉತ್ತಮ ಸ್ಕೂರಿನ ವಿಶ್ವಾಸ ಇಟ್ಟಿರುತ್ತಾರೆ.   ಆ ತಂಡ ಕೂಡಾ ಚೆನ್ನಾಗಿ ಆಡುವ ಮೂಲಕ ಅದನ್ನು ಸಾಬೀತುಪಡಿಸಬೇಕಾಗುತ್ತದೆ. ಅದು ನಮ್ಮ ಹೊಣೆಗಾರಿಕೆ ಕೂಡಾ ಹೌದು.

ಮೊದಲ ಭಾಗಕ್ಕೆ ರ‍್ಯಾಂಬೋ-2 ಯಾವುದೇ ರೀತಿಯ ಪ್ರಸ್ತುತತೆ ಇಲ್ಲ
ಹಿರೋಹಿನ್ ಅಶಿಕಾ, ಛಾಯಾಗ್ರಾಹಕರನ್ನು ಹೊರತುಪಡಿಸಿದ್ದರೆ, ರ‍್ಯಾಂಬೋ ಮೊದಲ ಚಿತ್ರದಲ್ಲಿದ್ದ ತಂಡವೇ ಈ ಚಿತ್ರದಲ್ಲಿಯೂ ಇದೆ.  ಪ್ರೋಡಕ್ಷನ್ ಮ್ಯಾನೇಜರ್ ನರಸಿಂಹ ಕೂಡಾ ಕೂಡಾ ಆದೇ ಚಿತ್ರದ ಮೂಲಕ ವೃತ್ತಿ ಆರಂಭಿಸಿದ. ಕಥೆ ಸಿಗದೆ ಧೀರ್ಘ ಕಾಲ  ವಿರಾಮ ಉಂಟಾಯಿತು. ರ‍್ಯಾಂಬೋ ಟೈಟಲ್ ಅನ್ನೇ ಏಕೆ ಬಳಸಬಾರದು ಎಂದು ಯೋಚಿಸಿ ಇದನ್ನೆ ಬಳಸಲಾಯಿತು. ಕಾರು ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದೆ. ಈ ಚಿತ್ರದಲ್ಲಿ ಒಂದು ಕಾರಿನ ಬದಲು ಎರಡು ಕಾರು ಬಳಸಲಾಗಿದೆ.

ಒಂದು ಹಾಸ್ಯ ಥ್ರಿಲ್ಲರ್ ಸಂದೇಶದೊಂದಿಗೆ ಬರುತ್ತದೆ
ರಾಂಬೊ 2 ಎಂಬುದು ರಸ್ತೆ ಚಿತ್ರ ಮತ್ತು ಒಂದು ಪ್ರಕಾರದ ಒಂದು ವಿಧವಾಗಿದೆ, ಅದು ವಿರಳವಾಗಿ ತೆಗೆದುಕೊಳ್ಳಲ್ಪಡುತ್ತದೆ.ಅದನ್ನು ನಾವು  ವಿಭಿನ್ನ ರೀತಿಯಲ್ಲಿ ಚಿತ್ರಿಸುತ್ತಿದ್ದೇವೆ. ಈ ರೀತಿಯ ಕಥೆಯನ್ನು ಹಾಲಿವುಡ್ ನಲ್ಲಿ ನೋಡುತ್ತೇವೆ. ಅದನ್ನು ಕನ್ನಡದಲ್ಲಿ ತೋರಿಸುತ್ತಿರುವುದು ಸಂತೋಷವಾಗಿದೆ. ಶರಣ್ ಹಾಸ್ಯ ಶೈಲಿಯನ್ನು ವೀಕ್ಷಕರು ಇಷ್ಟಪಡುತ್ತಾರೆ. ಆದರೆ ಅವರು ತಾಜಾ ಅನುಭವದೊಂದಿಗೆ ಹೊರಬರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT