ನಟ ಶರಣ್ 
ಸಿನಿಮಾ ಸುದ್ದಿ

ನಾನು ಮೊದಲು ಹಾಸ್ಯನಟ, ನಂತರ ಹೀರೊ: ಶರಣ್

ನಟ ಶರಣ್ ನಾಳೆ ಬಿಡುಗಡೆಯಾಗುತ್ತಿರುವ ತಮ್ಮ ರ್ಯಾಂಬೊ2 ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ತಮ್ಮ...

ನಟ ಶರಣ್ ನಾಳೆ ಬಿಡುಗಡೆಯಾಗುತ್ತಿರುವ ತಮ್ಮ ರ್ಯಾಂಬೊ2 ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ತಮ್ಮ ಹೋಂ ಬ್ಯಾನರ್ ಲಡ್ಡೂ ಸಿನಿಮಾಸ್ ನಡಿ ನಿರ್ಮಿಸಿರುವ ಚಿತ್ರದಲ್ಲಿ ಶರಣ್ ಅವರೇ ನಾಯಕರಾಗಿದ್ದಾರೆ. ಈ ಚಿತ್ರ ನನಗೆ ಎಲ್ಲಾ ದೃಷ್ಟಿಯಿಂದಲೂ ಮುಖ್ಯವಾಗಿದೆ. ಚಿತ್ರದ ವಿಷಯ ಮತ್ತು ನಿರೂಪಣೆಯ ಶೈಲಿಗೆ ಚಿತ್ರ ವಿಭಿನ್ನವಾಗಿದ್ದು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಕುತೂಹಲ ಶರಣ್ ಗಿದೆ.

ಇದೇ ಕಾತರತೆಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶರಣ್, ತಮ್ಮ ಹಿಂದಿನ ರ್ಯಾಂಬೊ ಚಿತ್ರದತ್ತ ಹೊರಳಿದರು. ಅದು 2012ರಲ್ಲಿ ರ್ಯಾಂಬೊ ಚಿತ್ರ ತೆರೆಕಂಡ ಸಮಯ. ನನ್ನ 100ನೇ ಚಿತ್ರವದು ಮತ್ತು ಹಾಸ್ಯನಟನಿಂದ ನಾಯಕನಟನಾಗಿ ಬದಲಾದ ಚಿತ್ರ ಕೂಡ ಹೌದು. ಅಂದು ಆ ಸಿನಿಮಾ ನನ್ನ ಆಯ್ಕೆಯಾಗಿರಲಿಲ್ಲ. ರ್ಯಾಂಬೊ ನಾಯಕನಾಗಿ ನನ್ನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುವ ಚಿತ್ರ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ನನ್ನನ್ನು ನಿರ್ಮಾಪಕನನ್ನಾಗಿ ಮಾಡುತ್ತದೆ ಈ ಚಿತ್ರ ಎಂದು ಕೂಡ ಭಾವಿಸಿರಲಿಲ್ಲ. ಚಿತ್ರದ ನಾಯಕನಾಗಿ ಅಭಿನಯಿಸಬೇಕೆಂದು ಅಂದು ನನ್ನನ್ನು ಕೇಳಿಕೊಂಡಾಗ ಆರಂಭದಲ್ಲಿ ಇಲ್ಲ ಅಂದಿದ್ದೆ. ಅಂದು ನನ್ನ ಮನಸ್ಸು ಬದಲಾಯಿಸಿದ್ದು ಒಳ್ಳೆಯದಾಯಿತು ಎಂದು ಈಗ ಅನಿಸುತ್ತಿದೆ. ನನ್ನ ಅದೃಷ್ಟ ಬದಲಾಯಿತು ಎನ್ನುತ್ತಾರೆ.

ಹಾಗೆಂದು ಶರಣ್ ತಮ್ಮ ಆರಂಭದ ದಿನಗಳನ್ನು ಮರೆಯುವುದಿಲ್ಲ. ಸುಮಾರು 10 ವರ್ಷಗಳ ಕಾಲ ಹಾಸ್ಯನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಶರಣ್ ವೃತ್ತಿಯಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂದು ಬಯಸಿ ಬೇರೆ ರೀತಿಯ ಪಾತ್ರಗಳನ್ನು ಮಾಡಲು ಆರಂಭಿಸಿದರು. ಆಗ ಅವರಿಗೆ ಮನಸ್ಸಿಗೆ ಹೊಳೆದಿದ್ದೇ ನಾಯಕ ನಟನಾಗಲು. ಆದರೆ ನಾಯಕನಾಗಲು ಅರ್ಹನೇ, ಪಾತ್ರ ಪ್ರೇಕ್ಷಕರಿಗೆ ಹಿಡಿಸಬಹುದೇ ಎಂದು ಕೂಡ ಅವರ ಮನಸ್ಸಿಗೆ ಆತಂಕವುಂಟಾಗಿತ್ತಂತೆ.

ಆದರೆ ತಮಗೆ ಸಿಕ್ಕಿದ ಚಿತ್ರತಂಡ ನನ್ನಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು. ಹಾಸ್ಯನಟನಿಂದ ನಾಯಕನಾಗಿ ಪಾತ್ರದ ಅಭಿನಯದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ನನ್ನ ಪ್ರತಿ ಸಿನಿಮಾದಲ್ಲಿಯೂ ಪ್ರೇಕ್ಷಕರನ್ನು ನಗಲು ಪ್ರಯತ್ನಿಸುತ್ತೇನೆ. ನಟರಾಗಿ ನಮ್ಮ ವೈವಿಧ್ಯತೆಯನ್ನು ನಾವು ಸಾಬೀತುಪಡಿಸಬೇಕು. ಪಾತ್ರದಲ್ಲಿ ಸಂಪೂರ್ಣ ಬದಲಾಗುವುದಿಲ್ಲ. ಹಾಸ್ಯದಲ್ಲಿಯೇ ಕೊನೆಯ ಮಟ್ಟವನ್ನು ತಲುಪುವುದು ಎಂದು ಚಿತ್ರತಂಡ ಹೇಳಿ ನನ್ನನ್ನು ಒಪ್ಪಿಸಿತು ಎಂದು ಆರಂಭದಲ್ಲಿ ನಾಯಕ ನಟನಾದ ಬಗ್ಗೆ ಶರಣ್ ಹೇಳಿಕೊಳ್ಳುತ್ತಾರೆ.
ರ್ಯಾಂಬೊ ಚಿತ್ರ ತಮ್ಮ ವೃತ್ತಿಜೀವನದಲ್ಲಿ ಮೈಲಿಗಲ್ಲು ಆದಂತೆ ರ್ಯಾಂಬೊ2 ಕೂಡ ಹೆಚ್ಚಿನ ಹೆಸರು, ಯಶಸ್ಸು ತಂದುಕೊಡುತ್ತದೆ ಎಂಬ ವಿಶ್ವಾಸ ಅವರಲ್ಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT