ಶಕುಂತಲೆಯನ್ನು ಕೈಗೆತ್ತಿಕೊಂಡ ನಾದಬ್ರಹ್ಮ
ನಾದಬ್ರಹ್ಮ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಸಂಗೀತ ನಿರ್ದೇಶಕ ಹಂಸಲೇಖ ...
ನಾದಬ್ರಹ್ಮ ಎಂದು ಅಭಿಮಾನಿಗಳಿಂದ ಕರೆಯಿಸಿಕೊಳ್ಳುವ ಸಂಗೀತ ನಿರ್ದೇಶಕ ಹಂಸಲೇಖ ಇಂದು ಸಂಗೀತದ ಜೊತೆಗೆ ನಿರ್ದೇಶನದ ಕೆಲಸವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ. ಶಕುಂತಲಾ ಎಂಬ ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ತಯಾರಿಸುತ್ತಿರುವ ಹಂಸಲೇಖರ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಬಗ್ಗೆ ಜೂನ್ 23ರಂದು ಅವರ ಹುಟ್ಟುಹಬ್ಬದ ದಿನ ಘೋಷಣೆ ಮಾಡಲಿದ್ದಾರೆ.
ಈ ವಿಷಯ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ಶಕುಂತಲಾ ಒಂದು ಇತಿಹಾಸ ಆಧಾರಿತ ಚಿತ್ರವಾಗಿದೆ. ಬಿಎಲ್ ವೇಣು ಅವರು ಬರೆದ ಪುಸ್ತಕದಿಂದ ಹಂಸಲೇಖ ಶಕುಂತಲಾದ ಕಥೆಯನ್ನೆತ್ತಿಕೊಂಡಿದ್ದಾರೆ. ಚಿತ್ರದ ತಯಾರಿ ಭರದಿಂದ ಸಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.