ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ 'ಸರಿಗಮಪ ಲಿಟಲ್ ಚಾಂ ಸೀಸನ್ 14'ರ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಳಗಾವಿಯ ವಿಶ್ವ ಪ್ರಸಾದ್ ಗೆಲುವಿನ ಕಿರೀಟವನ್ನು ಧರಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನ ವೈಟ್ ಆರ್ಕಿಡ್ಸ್ ಸಭಾಭವನದಲ್ಲಿ ನಿನ್ನೆ ಸಂಜೆ ನಡೆದ ಅಂತಿಮ ಹಣಾಹಣಿಯಲ್ಲಿ ಉಡುಪಿಯ ಅಭಿಜಾತ್ ಭಟ್, ಇಟಗಿಯ ವಿಶ್ವಪ್ರಸಾದ್, ಬಳ್ಳಾರಿಯ ಶಿಶು ತಾನಸೇನ್ ಜ್ಞಾನೇಶ್, ಬೆಂಗಳೂರಿನ ಕೀರ್ತನ, ಮತ್ತು ಕ್ವಾರ್ಟರ್ ಫಿನಾಲೆಯಿಂದ ನೇರವಾಗಿ ಫೈನಲ್ ತಲುಪಿದ ಚನ್ನಗಿರಿಯ ತೇಜಸ್ ಶಾಸ್ತ್ರಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡು ಬಂತು.
ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬನಾಗಿದ್ದ ವಿಶ್ವ ಪ್ರಸಾದ್ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡರೆ, ಕೀರ್ತನಾ ಮತ್ತು ಜ್ಞಾನೇಶ್ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡರು. ತೇಜಸ್ ಮೂರನೇ ಮತ್ತು ಅಭಿಜಿತ್ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು. ಮೂವರು ತೀರ್ಪುಗಾರರು ಮತ್ತು ಸಾರ್ವಜನಿಕ ಮತಗಳ ಸಹಾಯದಿಂದ ವಿಜೇತರನ್ನು ಆಯ್ಕೆ ಮಾಡಲಾಯ್ತು.