ಬೆಂಗಳೂರು: ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ರಾಜ್ ಕುಮಾರ ನಟನೆಯ ಚಿತ್ರಕ್ಕೆ ಯುವರತ್ನ ಎಂದು ಟೈಟಲ್ ಫೈನಲ್ ಆಗಿದೆ.
ಪವರ್ ಆಫ್ ಯೂತ್ ಎಂಬ ಟ್ಯಾಗ್ ಲೈನ್ ಹೊಂದಿರುವ ಯುವರತ್ನ ಟೈಟಲ್ ಅನ್ನು ಅಭಿಮಾನಿಯೊಬ್ಬರಿಂದ ಸಂತೋಷ್ ಬಹಿರಂಗ ಪಡಿಸಿದ್ದಾರೆ. ಈಗ ಸಂತೋಷ್ ಪ್ರೇಕ್ಷಕರಿಗೆ ಮತ್ತೊಂದು ಕುತೂಹಲ ಮೂಡಿಸಿದ್ದಾರೆ.
ಸಿನಿಮಾದಲ್ಲಿ ಪುನೀತ್ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿದ್ದಾರೆ, ಈಗಾಗಲೇ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಜೋಡಿಯಲ್ಲಿ ರಾಜಕುಮಾರ ಸಿನಿಮಾ ಸಖತ್ ಹಿಟ್ ಕಂಡಿತ್ತು, ಈಗ ಮತ್ತದೆ ಜೋಡಿ ಹೊಸ ಹಿಟ್ ನೀಡಲು ಸಿದ್ದತೆ ನಡೆಸಿದೆ, ಡಿಸೆಂಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.