ಪುನೀತ್ ರಾಜಕುಮಾರ್, ತಮನ್ನಾ ಭಾಟಿಯಾ
ರಾಜಕುಮಾರ ಚಿತ್ರಕ್ಕಾಗಿ ತಮಿಳು ನಟಿ ಪ್ರಿಯಾ ಆನಂದ್ ರನ್ನು ಕರೆತಂದಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇದೀಗ ಯುವರತ್ನ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಗೆ ನಾಯಕಿಯಾಗಿ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾರನ್ನು ಕರೆ ತರುವ ಸಾಧ್ಯತೆ ಇದೆ.
ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ತಮನ್ನಾ ಭಾಟಿಯಾ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದರು. ಇದೀಗ ತಮನ್ನಾರನ್ನೇ ಯುವರತ್ನ ಚಿತ್ರಕ್ಕೆ ಆಯ್ಕೆ ಮಾಡಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಉತ್ಸುಹಕರಾಗಿದ್ದಾರೆ.
ಇನ್ನು ಪುನೀತ್ ಜತೆ ನಟಿಸುವುದಕ್ಕೆ ತಮನ್ನಾ ಭಾಟಿಯಾ ಸಹ ಉತ್ಸುಹಕರಾಗಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡದ ಜಾಗ್ವಾರ್ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು.
ನವೆಂಬರ್ 1ರಂದು ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರದ ಟೈಟಲ್ ಬಿಡುಗಡೆಯಾಗಿತ್ತು. ಆಗಿನಿಂದ ಚಿತ್ರದ ಕುರಿತಂತೆ ನಿರೀಕ್ಷೆಗಳು ಹೆಚ್ಚಾಗಿದೆ.