ಪುನೀತ್ 'ನಟಸಾರ್ವಭೌಮ'ನ ಹಾಡಿಗೆ ಅಪರೂಪದ ವಿಶೇಷ ಸೆಟ್! 
ಸಿನಿಮಾ ಸುದ್ದಿ

ಪುನೀತ್ 'ನಟಸಾರ್ವಭೌಮ'ನ ಹಾಡಿಗೆ ಅಪರೂಪದ ವಿಶೇಷ ಸೆಟ್!

ಪುನೀತ್ ರಾಜ್ ಕುಮಾರ ಅವರ ಚಿತ್ರರಂಗದ ಮೇನಿನ ಅಭಿಮಾನ, ನಟನೆಯಲ್ಲಿನ ಶ್ರದ್ದೆಯ ಕುರಿತು ನಾವೆಲ್ಲಾ ಕೇಳಿದ್ದೇವೆ. ಇದೀಗ "ನಟಸಾರ್ವಭೌಮ" ನಿರ್ದೇಶಕರು ಪವರ್ ಸ್ಟಾರ್ ಪುನೀತ್ ಅವರ.....

ಬೆಂಗಳೂರು: ಪುನೀತ್ ರಾಜ್ ಕುಮಾರ ಅವರ ಚಿತ್ರರಂಗದ ಮೇನಿನ ಅಭಿಮಾನ, ನಟನೆಯಲ್ಲಿನ ಶ್ರದ್ದೆಯ ಕುರಿತು ನಾವೆಲ್ಲಾ ಕೇಳಿದ್ದೇವೆ. ಇದೀಗ "ನಟಸಾರ್ವಭೌಮ" ನಿರ್ದೇಶಕರು ಪವರ್ ಸ್ಟಾರ್ ಪುನೀತ್ ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ಕೊಡಲು ತಯಾರಾಗಿದ್ದಾರೆ. ಚಿತ್ರದಲ್ಲಿ ಪುನೀತ್ ಅವರ ಇಂಟ್ರೊಡಕ್ಷನ್ ಹಾಡು ಅತ್ಯ್ಂತ ವಿಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿರುವುದೇ ಇದಕ್ಕೆ ಕಾರಣವಾಗಲಿದೆ.
ನವ್ಚೆಂಬರ್ 12ರಿಂದ ಈ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದೆ.ಮುಂದಿನ ಆರು ದಿನಗಳ ಕಾಲ ನಡೆಯಲಿರುವ ಈ ಹಾಡಿನ ಚಿತ್ರೀಕರಣ ಕುರಿತು ನಿರ್ದೇಶಕ ಹಾಗೂ ಹಾಡಿನ ರಚನೆಗಾರರೂ ಆಗಿರುವ ಪವನ್ ಒಡೆಯರ್ ಮಾತನಾಡಿ ಇದು ಅತ್ಯಂತ ವಿಭಿನ್ನವಾಗಿರಲಿದೆ, ಸಂಗೀತ ನಿರ್ದೇಶಕ ಡಿ. ಇಮಾನ್ ಅವರ ಸಂಗೀತ ಸಂಯೋಜನೆ ಅದ್ಭುತವಾಗಿ ಮೂಡಿ ಬರಲಿದೆ./ಇದು ಕನ್ನಡ ಚಿತ್ರರಂಗದಲ್ಲಿ ಮೂಡಿಬರುತ್ತಿರುವ ಅದ್ದೂರಿ ಇಂಟ್ರೋಡಕ್ಷನ್ (ಪರಿಚಯದ) ಗೀತೆಯಾಗಲಿದೆ ಎಂದು ಅವರು ಹೇಳಿದ್ದಾರೆ 
"ನಟಸಾರ್ವಭೌಮ- ಈತ ಸಿನಿಮಾ ಜಗತ್ತಿನ ರಾಜನು ಎನ್ನುವ ಗೀತ ಸಾಹಿತ್ಯಕ್ಕೆ ಪುಇನೀತ್ ಸೊಗಸಾದ ನೃತ್ಯ ಮಾಡಲಿದ್ದಾರೆ. ನಾಲ್ಕು ವಿಶೇಷ, ದುಬಾರಿ, ವಿಶಿಷ್ಟ ಸೆಟ್ ಗಳಲ್ಲಿ ಹಾಡಿನ ಚಿತ್ರೀಕರಣ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.ನೃತ್ಯ ಶಿಕ್ಷಕ್ಲ ಭೂಷಣ ಹಾಗೂ ಯೋಗಿ ವಿನ್ಯಾಸಗೊಳಿಸಿದ ವೇಷಭೂಷಣಗಳು ಹಾಡಿಗೆ ಇನ್ನಷ್ಟು ಸೌಂದರ್ಯ ಒದಗಿಸಲಿದೆ"
ಡಿಸೆಂಬರ್ ನಲ್ಲಿ ಬಿಡುಗಡೆ
ಪುನೀತ್ ಪತ್ರಿಕೋದ್ಯಮಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಕಮರ್ಷಿಯಲ್ ಚಿತ್ರದಲ್ಲಿ ರಚಿತಾ ರಾಮ್, ಅನುಪಮಾಪರಮೇಶ್ವರ್ ಸಹ ನಾಯಕಿಯರಾಗಿ ಕಾಣಿಸಲಿದ್ದಾರೆ.ರಾಕ್ ಲೈನ್ ವೆಂಕಟೇಶ್ ಚಿತ್ರ ನಿರ್ಮಾಪಕರಾಗಿದ್ದು ಚಿತ್ರಡಿಸೆಂಬರ್ ನಲ್ಲಿ ಬಿಡುಗಡೆಯಾಗಬೇಕೆಂದು ಚಿತ್ರತಂಡ ತೀರ್ಮಾನಿಸಿದೆ.ಆದರೆ ಅಂತಿಮ ದಿನಾಂಕ ಮಾತ್ರ ಇನ್ನೂ ನಿರ್ಧಾರವಾಗಬೇಕಿದೆ.
ನವೆಂಬರ್ 18ರ ಒಳಗೆ ಚಿತ್ರದ ಹಾಡಿನ ಚಿತ್ರೀಕರಣ ಮುಗಿಸಬೇಕೆನ್ನುವುದು ತಂಡದ ನಿರ್ಣಯ. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸಹ ಬಹಳ ಚುರುಕಿನಿಂದ ಸಾಗಿದ್ದು ಇದಾಗಲೇ ಚಿತ್ರದ ಮೊದಲರ್ಧ ಭಾಗದ ಕಾರ್ಯ ಮುಗಿದಿದೆ.ದೀಪಾವಳಿ ಬಳಿಕ ದ್ವಿತೀಯಾರ್ಧದ ಕೆಲಸ ಪ್ರಾರಂಬವಾಗಲಿದೆ.
ಕಳೆದ ವರ್ಷ ಡಿಸೆಂಬರ್ 21ಕ್ಕೆ "ಅಂಜನಿಪುತ್ರ" ಬಿಡುಗಡೆಯಾಗಿದ್ದು ಆ ಬಳಿಕ ಪುನೀತ್ ಅಭಿನಯದ ಚಿತ್ರ ತೆರೆ ಕಂಡಿಲ್ಲ. ಹೀಗಾಗಿ ಮತ್ತೆ ಬೆಳ್ಳಿ ತೆರೆಯಲ್ಲಿ ಪವರ್ ಸ್ಟಾರ್ ಹವಾ ಸೃಷ್ಟಿ ಮಾಡುವುದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಎಲ್ಲವೂ ಯೋಜನೆ ಪ್ರಕಾರವೇ ನಡೆದರೆ ಈ ಡಿಸೆಂಬರ್ ನಲ್ಲಿ ನಟಸಾರ್ವಭೌಮ ಹೊಸ ದಾಖಲೆ ಬರೆಯುವುದು ಸುಳ್ಳಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT