ಸಿನಿಮಾ ಸುದ್ದಿ

ಎಐಎಡಿಎಂಕೆ ಒತ್ತಡಕ್ಕೆ ಮಣಿದ 'ಸರ್ಕಾರ್' ಚಿತ್ರತಂಡ: ನಾಲ್ಕು ಕಡೆ ಕತ್ತರಿ ಪ್ರಯೋಗಕ್ಕೆ ಅಸ್ತು

Raghavendra Adiga
ಚೆನ್ನೈ: ವಿಜಯ್ ನಟನೆಯ "ಸರ್ಕಾರ್" ವಿರುದ್ಧ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ತೀವ್ರ ವಿರೋಧದ ಬಳಿಕ ನಾಲ್ಕು ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ.
ಮಂಗಳವಾರ ತೆರೆಕಂಡ ಈ ಚಿತ್ರದ ಒಟ್ಟು 5 ಸೆಕೆಂಡ್ ವೀಡಿಯೋ ದೃಶ್ಯ ಕಟ್ ಮಾಡಲಾಗಿದೆ, ಹಾಗೆಯೇ ಮೂರು ಕಡೆಗಳಲ್ಲಿ ಆಡಿಯೋವನ್ನು ಮ್ಯೂಟ್ ಮಾಡಲಾಗಿದೆ.
ತಮಿಳುನಾಡು ಸರ್ಕಾರವನ್ನು ಕೆಟ್ಟದಾಗಿ ತೋರಿಸಿದ್ದ ಚಿತ್ರದ ದೃಶ್ಯಗಳ ವಿರುದ್ಧ ರಾಜ್ಯದ ಚುಕ್ಕಾಣಿ ಹಿಡಿದಿರುವ ಎಐಎಡಿಎಂಕೆ ಪಕ್ಷದ ಅನೇಕ ಶಾಸಕರು  ಮತ್ತು ಪಕ್ಷದ ಕಾರ್ಯಕರ್ತರು ತಮ್ಮ ಅತೃಪ್ತಿಯನ್ನು ಹೊರಹಾಕಿದ್ದರು. 
ತಮಿಳುನಾಡು ಸರ್ಕಾರ ಮಹತ್ವದ ಯೋಜನೆ ಮಿಕ್ಸಿ ಹಾಗೂ ಗ್ರೇಂಡರ್ ಗಳನ್ನು ಬಡವರಿಗೆ ಉಚಿತವಾಗಿ ಹಂಚುವ ಯೋಜನೆಯನ್ನು ಚಿತ್ರದಲ್ಲಿ ಕೀಲಾಗಿ ತೋರಿಸಲಾಗಿದೆ ಎಂದು ಶಾಸಕರು ಹಾಗೂ ಆಡಳಿತ ಪಕ್ಷದ ಪ್ರಮುಖರು ಅಸಮಾಧಾನಗೊಂಡಿದ್ದರು. ಅಲ್ಲದೆ ಚಿತ್ರದಲ್ಲಿ ಕೋಮಲಬಲ್ಲಿ ಪಾತ್ರವು ರಾಜ್ಯದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಹೋಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವರಲಕ್ಷ್ಮಿ ಶರತ್ ಕುಮಾರ್ ಈ ಕೋಮಲವಲ್ಲಿ ಪಾತ್ರ ನಿರ್ವಹಿಸಿದ್ದರು.
ಇನ್ನು ಚಿತ್ರ ನಿರ್ದೇಶಕ ಮುರುಗ ದಾಸ್ ಪ್ರತಿಭಟನೆ ಹಾಗೂ ಬಂಧನ ಭೀತಿಯ ಕಾರಣ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಮಂಗಳವಾರ ಮದ್ಯರಾತ್ರಿ ವೇಳೆ ಪೋಲೀಸರು ಅನೇಕ ಸಲ ಅವರ ಮನೆ ಬಾಗಿಲು ತಟ್ಟಿದ್ದರು ಎಂದು ಚಿತ್ರ ನಿರ್ದೇಶಕರು ಆರೋಪಿಸಿದ್ದಾರೆ.
ವಿಜಯ್, ಕೀರ್ತಿ ಸುರೇಶ್, ವರಲಕ್ಷ್ಮಿ ಶರತ್ ಕುಮಾರ್, ಯೋಗಿ ಬಾಬು ಹಾಗೂ ರಾಧಾ ರವಿ ಇನ್ನೂ ಉಂತಾದವರ ಅಭಿನಯದ ಈ ಚಿತ್ರ ಬಿಡುಗಡೆಯಾದ ಎರಡನೇ ದಿನಕ್ಕೇ 100 ಕೋಟಿ ರು. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವುದರೊಡನೆ ನೂತನ ದಾಖಲೆ ನಿರ್ಮಾಣ ಮಾಡಿದೆ.
SCROLL FOR NEXT