ಹುಬ್ಬಳ್ಳಿ: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ವಿರುದ್ಧ ಕಿಡಿಕಾರಿದ್ದ ನಟಿ ಹರ್ಷಿಕಾ ಪೂಣಚ್ಚ ಇದೀಗ ಮೀಟೂ ಬಾಂಬ್ ಸಿಡಿಸಿದ್ದಾರೆ.
ಹರ್ಷಿಕಾ ಪೂಣಚ್ಚ ಅವರು ತನಗೂ ಲೈಂಗಿಕ ಕಿರುಕುಳದ ಅನುಭವವಾಗಿದ್ದು ಅದಕ್ಕಾಗಿಯೇ ಬಾಲಿವುಡ್ ನಿಂದ ಮರಳಿ ಬಂದಿರುವುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಲೈಂಗಿಕ ಕಿರುಕುಳ ಸೇರಿದಂತೆ ಯಾವುದೇ ರೀತಿಯ ಕಿರುಕುಳದಿಂದ ಬೇಸತ್ತ ಮಹಿಳೆಯರು ತಮ್ಮ ನೋವನ್ನು ಹಂಚಿಕೊಳ್ಳಲು ಇರುವ ಏಕೈಕ ಸೂಕ್ತ ವೇದಿಕೆ ಎಂದರೆ ಅದು ಮೀಟೂ. ಆದರೆ ಕೆಲವರು ಇದನ್ನು ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.