ಬೆಂಗಳೂರು: "ಇತ್ತೀಚೆಗೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಅಪಾರ ಮೆಚುಗೆ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ "ಕೆಜಿಎಫ್" ಚಿತ್ರದ ಟ್ರೇಲರ್ ನಿಂದಲೇ ತನಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ, ನಾನು ಪ್ರತಿಬಾರಿ ಟ್ರೇಲರ್ ನೋಡಿದಾಗಲೂ ರೋಮಾಂಚಿತಳಾಗುತ್ತೇನೆ: ಇದು :ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಮಾತು.
ಮಾಡೆಲ್ ಆಗಿದ್ದ ಶ್ರೀನಿಧಿ ಶೆಟ್ಟಿ ಮೊದಲ ಬಾರಿಗೆ ಕನ್ನಡ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಅದೂ ಸಹ ದೊಡ್ಡ ಬಜೆಟ್ ಹಾಗೂ ತಾರಾಂಗಣವಿರುವ ಚಿತ್ರದಲ್ಲೇ ಅವಕಾಶ ದೊರಕಿರುವುದು ಅವರ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. "ಕೆಜಿಎಫ್" ನಲ್ಲಿ ಶ್ರೀನಿಧಿ ’ರೀನಾ’ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಟ್ರೇಲರ್ ನಲ್ಲಿ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಶ್ರೀನಿಧಿ ಚಿತ್ರದಲ್ಲಿ ತನ್ನ ಪಾತ್ರಕ್ಕೆ ಸಾಕಷ್ಟು ವೈಶಿಷ್ಟ್ಯತೆ ಇದೆ ಎನ್ನುತ್ತಾರೆ. "ನಿರ್ದೇಶಕ ಪ್ರಶಾಂತ್ ನೀಲ್ ಅವತಿಗೆ ಜನರ ಕ್ಯುತೂಹಲವನ್ನು ಕಾಯ್ದುಕೊಳ್ಳುವುದು ಹೇಗೆಂದು ತಿಳಿದಿದೆ, ಚಿತ್ರ ಡಿಸೆಂಬರ್ ನಲ್ಲಿ ತೆರೆ ಕಾಣುವವರೆಗೆ ನನ್ನ ಗ್ಲಾಮರ್ ಲುಕ್ ನ್ ನೋಟವನ್ನೇ ಅನುಭವಿಸಿ" ಎಂದು ಅವರು ಪ್ರೇಕ್ಷಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
"ಹಲವು ನಟಿಯರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಯಸಿದರು. ಆದರೆ ಅಂತಿಮವಾಗಿ ನಾನು ನಾಯಕಿ ಪಾತ್ರಕ್ಕೆ ಆಯ್ಕೆಯಾದೆ. ಈಗ ಚಿತ್ರದ ಕುರಿತು ಕೇವಲ ಕನ್ನಡ ಜನರಲ್ಲದೆ ಇಡೀ ದೇಶದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.ನಾನು ರೀನಾ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದ ನಿರ್ದೇಶಕರಿಗೆ ಈ ಮೂಲಕ ದನ್ಯವಾದ ಹೇಳಲು ಬಯಸುವೆ.ಏಕೆಂದರೆ ನನಗೆ ನಟನೆ ಕುರಿತ ಯಾವ ಅನುಭವವಿಲ್ಲ ಎಂದು ತಿಳಿದೂ ಸಹ ಅವರು ನನ್ನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಹಾಗೆಯೇ ಚಿತ್ರ ನಿರ್ಮಾಪಕರಿಗೆ ಹಾಗೂ ನಾಯಕ ಯಶ್ ಅವರಿಗೆ ಸಹ ನನ್ನ ಧನ್ಯವಾದಗಳು"
ಸ್ಯಾಂಡಲ್ ವುಡ್ ನಲ್ಲಿ ತನ್ನ ಭವಿಷ್ಯದ ಕುರಿತು ಮಾತನಾಡಿದ ಶ್ರೀನಿಧಿ "ನಾನು ಈ ಚಿತ್ರದ ಬಿಡುಗಡೆಗಾಗಿ ಕಾಯುತ್ತೇನೆ. ಪ್ರೇಕ್ಷಕರು ನನ್ನ ಅಭಿನಯಕ್ಕೆ ಯಾವ ರೀತಿ ಸ್ಪಂದಿಸುವರು, ನನಗೆ ಇನ್ನು ಮುಂದಿನ ದಿನಗಳಲ್ಲಿ ಯಾವ ಬಗೆಯ ಅವಕಾಶ ದೊರೆಯಲಿದೆ ಎನ್ನುವುದು ನನಗೆ ಕುತೂಹಲದ ವಿಚಾರವಾಗಿದೆ.
"ಚಿತ್ರದ ಎರಡನೇ ಭಾಗದಲ್ಲಿ ಅಭಿನಯಿಸಲು ಣಾನೀಗಲೇ ಸಿದ್ದ ಆದರೆ ಚಿತ್ರತಂಡ ಸ್ವಲ್ಪ ವಿಶ್ರಾಂತಿಯನ್ನು ಬಯಸಿದೆ. ಇನ್ನು ನನಗೆ ಇನ್ನಷ್ಟು ಕೆಲಸಗಳಲ್ಲಿ ತೊಡಗಿಕೊಳ್ಳುವುದು ಅಗತ್ಯವಿದೆ.ಕೆಜಿಎಫ್ ನನ್ನ ಪಾಲಿಗೊಂದು ಮೈಲಿಗಲ್ಲಾಗಿದೆ. ಈ ಬಳಿಕ ನಾನು ಮುಂದಿನ ಚಿತ್ರ ಆತ್ಕೆ ಮಾಡಿಕೊಳ್ಳುವ ಮುನ್ನ ನಿರ್ದೇಶಕ, ನಿರ್ಮಾಪಕರು, ಚಿತ್ರತಂಡವನ್ನು ಗಮನದಲ್ಲಿಟ್ಟುಕೊಳ್ಳಲಿದ್ದೇನೆ"
ಶ್ರಿನಿಧಿ ಹಾಗೂ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ಜೆಜಿಎಫ್ ಡಿಸೆಂಬರ್ 21ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos