ಸಿನಿಮಾ ಸುದ್ದಿ

ನನ್ನ ಕಾಲದಲ್ಲಿ ನನಗೂ ಅಂತಹ ಅನುಭವವಾಗಿದೆ: #MeToo ಬಗ್ಗೆ ಬಿ. ಜಯಶ್ರೀ ಹೇಳಿದ್ದಿಷ್ಟು

Raghavendra Adiga
ತುಮಕೂರು: ನನ್ನ ಕಾಲದಲ್ಲಿ ನಾನೂ ಸಹ "ಮೀಟೂ" ನಂತಹಾ ಅನುಭವಗಳನ್ನು ಕಂಡಿದ್ದ್ನೆ. ಅದನ್ನು ನಾನು ಹೇಳಿಕೊಂಡಿದ್ದೇನೆ. ನನ್ನ ಆತ್ಮಕಥೆ  ‘ಕಣ್ಣಾಮುಚ್ಚೆ ಕಾಡೇಗೂಡೆ’ ಪುಸ್ತಕದಲ್ಲಿ  ಸಹ ಅದು ದಾಖಲಾಗಿದೆ. ಹಾಗೆಂದ ಮಾತ್ರಕ್ಕೆ ನನಗೆ ನ್ಯಾಯ ಸಿಗಲಿ ಎಂದು ಅರ್ಥವಲ್ಲ.ನನಗಾದ ಕಷ್ಟ ಅರಿತು ಇನ್ನೊಬ್ಬರು ಎಚ್ಚೆತ್ತುಕೊಳ್ಳಬೇಕು ಎಂದಷ್ಟೇ ನನ್ನ ಭಾವನೆ - ಇದು ಹಿರಿಯ ರಂಗ ಕಲಾವಿದೆ ಬಿ. ಜಯಶ್ರೀ ಅವರ ನುಡಿಗಳು.
ತುಮಕೂರು ರಾಜರಾಜೇಶ್ವರಿ ನೃತ್ಯ ಕಲಾಮಂದಿರದಲ್ಲಿ ನಡೆದ ಹಿರಿಯ ರಂಗಕರ್ಮಿ ರಾಮನ್ ಸನ್ಮಾನ ಸಮಾರಂಭದಲ್ಲಿ ಬಾಗವಹಿಸಿದ್ದ ಜಯಶ್ರೀ ಮಾದ್ಯಮಗಳೊಡನೆ ಮಾತನಾಡಿ ತಮ್ಮ ಅನುಭವ ಹೇಳಿಕೊಂಡರು.
"ನನಗಾದ ಕೆಟ್ಟ ಅನುಭವ ನನಗೆ ಗೊತ್ತು, ನನಗೆ ಕಿರುಕುಳ ನೀಡಿದವರಿಗೆ ಗೊತ್ತು. ಇಷ್ಟಕ್ಕೆ ಅದು ಮುಗಿದಿದೆ, ನಾನು ಅದಾಗಲೇ ನನಗಾದ ಅನ್ಯಾಯದ ಬಗ್ಗೆ ಮ್ಮಾತನಾಡಿದ್ದೇನೆ.ಅದು ನನಗೆ ನ್ಯಾಯ ದೊರಕಲಿ ಎಂದಲ್ಲ, ನನ್ನ ಕಷ್ಟಗಳು ಬೇರೆಯವರಿಗೆ ಬಾರದಿರಲಿ ಎಂದು ನಾನು ಹೇಳುತ್ತೇನೆ.
"ಮೀಟೂ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಳ್ಳುವುದು ತಪ್ಪಲ್ಲ, ಆದರೆ ಅದಕ್ಕೆ ಒಂದು ಲಕ್ಷ್ಮಣ ರೇಖೆ ಹಾಕಿಕೊಳ್ಳುವುದು ಅಗತ್ಯ." ಅವರು ಹೇಳಿದ್ದಾರೆ.
"ನನ್ನ ಆತ್ಮಚರಿತ್ರೆಯನ್ನು ಬರೆದಿದ್ದು ಇದರಲ್ಲಿ ನನ್ನ ಅನುಭವಗಳನ್ನು ವಿವರಿಸಿದ್ದೇನೆ."
"ಮೀಟೂ ಬಗೆಗೆ ಎಷ್ಟರ ಮಟ್ಟಿಗೆ ಸಾಕ್ಷಿ ಒದಗಿಸುತ್ತೀರಿ ಎನ್ನುವುದು ಮುಖ್ಯ ಪ್ರಶ್ನೆ.ಉದಾಹರಣೆಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಎಷ್ಟೆಲ್ಲಾ ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆಗಳಿಗೆ ಉತ್ತರಿಸುವಾಗ ನೋವಾಗುತ್ತದೆ ತಾನೆ?" ಅವರು ಹೇಳಿದ್ದಾರೆ.
SCROLL FOR NEXT