ಭೈರವ ಗೀತದಲ್ಲಿ ಧನಂಜಯ್ ಮತ್ತು ಇರಾ ಮೊರ್ 
ಸಿನಿಮಾ ಸುದ್ದಿ

'ಲಿಪ್ ಲಾಕ್ ' ದೃಶ್ಯ ಮಾಡುವಾಗ ತುಂಬಾ ಮುಜುಗರಪಟ್ಟಿದ್ದೆ: ಇರಾ ಮೊರ್

ಸಿದ್ಧಾರ್ಥ ತಾತೋಲು ನಿರ್ದೇಶನದಲ್ಲಿ, ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಕನ್ನಡ ಮತ್ತು ತೆಲುಗು ...

ಸಿದ್ಧಾರ್ಥ ತಾತೋಲು ನಿರ್ದೇಶನದಲ್ಲಿ, ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಕನ್ನಡ ಮತ್ತು ತೆಲುಗು ಚಿತ್ರ ಭೈರವ ಗೀತಾ ತೆರೆಗೆ ಬರಲು ಸಜ್ಜಾಗಿದೆ.

ಕನ್ನಡದದಲ್ಲಿ ಹೆಸರು ಮಾಡಿರುವ ನಟ ಧನಂಜಯ್ ಜೊತೆ ಮುಂಬೈ ಮೂಲದ ಬೆಡಗಿ ಇರಾ ಮೊರ್ ನಟಿಸಿದ್ದಾರೆ. ಚಿತ್ರದಲ್ಲಿ ಗೀತಾ ಪಾತ್ರ ಮಾಡಿರುವ ಇರಾ ಕಥೆಯಲ್ಲಿ ಮತ್ತು ನಿಜ ಜೀವನದಲ್ಲಿ ಇರುವುದಕ್ಕೂ ಬಹಳ ವ್ಯತ್ಯಾಸವಿದೆಯೆಂದು ಅವರೇ ಹೇಳಿಕೊಂಡಿದ್ದಾರೆ.
 
ಚಿತ್ರದಲ್ಲಿ ಗೀತಾ ವಿದ್ಯಾವಂತ ಯುವತಿಯಾಗಿರುತ್ತಾಳೆ, ಲಂಡನ್ ನಿಂದ ಬಂದವಳು. ಮನೆಗೆ ಬಂದ ಮೇಲೆ ಅಲ್ಲಿ ಎಲ್ಲ ವಿರುದ್ಧವಾಗಿ ಆಕೆಗೆ ಕಾಣುತ್ತದೆ, ತಂದೆಯ ವಿರುದ್ಧ ಕೂಡ ಸಿಟ್ಟಿಗೇಳುತ್ತಾಳೆ. ನಿಜ ಜೀವನದಲ್ಲಿ ಗೀತಾಳ ಸ್ವಭಾವ ಕೆಲವೊಂದು ನನ್ನಲ್ಲಿದ್ದರೂ ಬಹಳಷ್ಟು ವೈರುಧ್ಯವಿದೆ ಎನ್ನುತ್ತಾರೆ ಇರಾ.

ಇಂದು ಸಿನಿಮಾಗಳಲ್ಲಿ ನಟನೆ ಮುಖ್ಯವಾಗುತ್ತದೆ. ಕೇವಲ ಗ್ಲಾಮರಸ್ ಸಾಕಾಗುವುದಿಲ್ಲ. ಸಿನಿಮಾದಲ್ಲಿ ಆದ ಬೆಳವಣಿಗೆಯಿದು. ಇಂದಿನ ಪ್ರೇಕ್ಷಕರು ನಟನಲ್ಲಿ ಸೂಕ್ಷ್ಮ ವ್ಯತ್ಯಾಸಗಳನ್ನು ಕಾಣುತ್ತಾರೆ, ಕೇವಲ ನಟನಟಿಯರನ್ನು ಮಾತ್ರ ನೋಡುವುದಿಲ್ಲ ಎನ್ನುತ್ತಾರೆ.

ಹಾಗಾದರೆ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯದ ಬಗ್ಗೆ ಕೇಳಿದಾಗ, ಮುತ್ತಿಕ್ಕುವ ದೃಶ್ಯ ಚಿತ್ರದಲ್ಲಿ ಅದು ಚಿತ್ರಕ್ಕೆ ಅಗತ್ಯವಿತ್ತೇ ಅಥವಾ ಚಿತ್ರದ ಪ್ರಚಾರಕ್ಕೆ ಬಳಸಿದ ತಂತ್ರವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಭೈರವ ಗೀತದಲ್ಲಿ ಪ್ರೀತಿಯನ್ನು ಹಂಚಿಕೊಳ್ಳುವ ಭಾವನೆಯಲ್ಲಿ ತುಟಿಗೆ ಮುತ್ತಿಕ್ಕುವ ದೃಶ್ಯ ಮುಖ್ಯವಾಗಿತ್ತು. ವೈಯಕ್ತಿಕವಾಗಿ ಆ ದೃಶ್ಯ ಮಾಡುವಾಗ ನಾನು ತುಂಬಾ ಸಂಕೋಚಗೊಂಡಿದ್ದೆ. ಚಿತ್ರೀಕರಣ ವೇಳೆ ನೂರಾರು ಜನರ ಸಮ್ಮುಖದಲ್ಲಿ ಅದನ್ನು ಮಾಡಬೇಕಾಗಿತ್ತು. ಅದನ್ನು ವೃತ್ತಿಪರವಾಗಿ ತೆಗೆದುಕೊಂಡು ಮಾಡಿದೆ ಎಂದರು.

ಸ್ಯಾಂಡಲ್ ವುಡ್ ಗೆ ಹೊಸಬಳಾಗಿ ಭಾಷೆ ಸವಾಲಿನದಾಗಿತ್ತಂತೆ ಇರಾಗೆ. ಥಿಯೇಟರ್ ಹಿನ್ನಲೆಯಿಂದ ಬಂದದ್ದರಿಂದ ಕ್ಯಾಮರಾ ಎದುರಿಸುವುದು ಕಷ್ಟವಾಗಿಲ್ಲ. ನಟನೆ ಎಂಬುದು ಕಲಿಕೆಯ ಪ್ರಕ್ರಿಯೆ ಎಂದರು ಇರಾ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT