ಬೆಂಗಳೂರು: 22 ವರ್ಷಗಳ ತಮ್ಮ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ ತಮ್ಮ ಬೆತ್ತಲೆ ಎದೆಯನ್ನು ತೋರಿದ್ದಾರೆ. ಎಸ್ ಕೃಷ್ಣ ನಿರ್ದೇಶನದ ಫೈಲ್ವಾನ್ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದ್ದು ವೈರಲ್ ಆಗಿದೆ.
ಶನಿವಾರ ಬಿಡುಗಡೆಯಾಗಿರುವ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದ ಪಾತ್ರಕ್ಕೆ ಸುದೀಪ್ ಈ ದೇಹದ ಅವಶ್ಯಕತೆಯಿದೆ. ಇದೇ ಮೊದಲ ಬಾರಿಗೆ ಸುದೀಪ್ ತಮ್ಮ 22 ವರ್ಷದ ವೃತ್ತಿ ಜೀವನದಲ್ಲಿ ನಗ್ನ ಎದೆ ತೋರಿಸುತ್ತಿದ್ದಾರೆ, ಸುದೀಪ್ ಅವರಿಗೆ ಬಾದ್ ಶಾ ಎಂಬ ಟೈಟಲ್ ಸೂಕ್ತವಾಗಿ ಹೊಂದುತ್ತದೆ ಎಂದು ನಿರ್ದೇಶಕ ಎಸ್.ಕೃಷ್ಣ ಹೇಳಿದ್ದಾರೆ.
ಸದ್ಯ ಸಿನಿಮಾ ಟೀಸರ್ ಸಿದ್ದವಾಗಿದ್ದು, ಇದೊಂದು ಕುಸ್ತಿ ಆಧಾರಿತ ಸಿನಿಮಾವಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿಅದನ್ನು ಕಟ್ ಮಾಡಲಾಗುವುದು, ಎಂದು ಹೇಳಿದ್ದಾರೆ. ಮುಂದಿನವಾರ ರೀಲಿಸ್ ಡೇಟ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಲಿವುಡ್ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೋವಲ್ ಜೊತೆಗಿನ ಫೈಟಿಂಗ್ ಬಾಕಿಯಿದೆ. ಈ ಸಿನಿಮಾಗಾಗಿ ಸುದೀಪ್ 13 ಕೆಜಿ ದೇಹ ತೂಕ ಹೆಚ್ಚು ಮಾಡಿದ್ದಾರೆ, ಮುಂದಿನ ಎರಡು ವಾರಗಳಲ್ಲಿ ಅವರು ತಮ್ಮ ನಾರ್ಮಲ್ ಪರಿಸ್ಥಿತಿಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.
8 ಭಾಷೆಗಳಲ್ಲಿ ಸುದೀಪ್ ಫೈಲ್ವಾನ್ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ. ತಮಿಳು, ತೆಲುಗು, ಮತ್ತು ಮರಾಠಿ ಭಾಷೆಗಳಲ್ಲಿ ನೋಂದಣಿಯಾಗಿದೆ, ಆಕಾಂಕ್ಷಾ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ, ಸುನೀಲ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ.