ಬೆಂಗಳೂರು: ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪಾತ್ರಗಳಲ್ಲಿ ಮಿಂಚಿದ್ದ ನಟ ಅಂಬರಿಷ್ ರಾಜಕೀಯದಲ್ಲೂ ಹೀರೋ ಆಗಿದ್ದರು. ಪ್ರಾಮಾಣಿಕ, ರಾಜಿಯಾಗದ ಸ್ವಭಾವ ಅಂಬರೀಷ್ ಅವರಿಗೆ ರಾಜಕೀಯ ಜೀವನದವಲ್ಲಿ ಯಶಸ್ಸಿಗೆ ಅಡಚಣೆಯಾಯಿತು.
1994 ರಿಂದ ರಾಜಕೀಯ ಜೀವನ ಆರಂಭಿಸಿದ ಅಂಬರೀಷ್ ಅಂದಿನ ಪ್ರಧಾನಿ ಪಿ,ವಿ ನರಸಿಂಹ ರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್ ತೊರೆದಿದ್ದ ಅವರು, ಜನತಾ ದಳ ಸೇರ್ಪಡೆಗೊಂಡಿದ್ದರು, ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕನಕಪುರ ಲೋಕಸಭೆ ಕ್ಷೇತ್ರದಿಂದ ದೇವೇಗೌಡರು ಆಯ್ಕೆಯಾದರು, ಗೌಡರ ರಾಜಿನಾಮೆಯಿಂದ ತೆರವಾದ ವಿಧಾನಸಭೆ ಕ್ಷೇತ್ರಕ್ಕೆ 1996 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಷ್ ಕಾಂಗ್ರೆಸ್ ನ ಸಿಎಂ ಲಿಂಗಪ್ಪ ವಿರುದ್ದ ಸೋಲನುಭವಿಸಿದ್ದರು.
1998ರ ಲೋಕಸಭೆ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1999ರ ಲೋಕಸಭೆ ಚುನಾವಣೆ ವೇಳೆ ಜನತಾ ದಳ ತೊರೆದು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದರು. 2004 ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದ ಅಂಬರೀಷ್. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಚಾರ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಅಷ್ಟರಲ್ಲಾಗಲೇ ಕಾವೇರಿ ವಿವಾದ ಭುಗಿಲೆದ್ದಿತ್ತು, ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲಾಗದ ಮಂಡ್ಯ ಜಿಲ್ಲೆ ರಾಜಕಾರಣಿಗಳು ರಾಜಿನಾಮೆ ನೀಡಬೇಕು ಎಂಬ ಆಗ್ರಹ ರೈತರಾಗಿದ್ದು, ಇದಕ್ಕೆ ಸ್ಪಂದಿಸಿದ್ದ ಅಂಬರೀಷಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2009 ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಂಬರೀಷ್ ಜೆಡಿಎಸ್ ನ ಚಲುವರಾಯ ಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು, 2013ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿದ್ದ ಗೆದ್ದ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
2016 ರಲ್ಲಿ ಅಂಬರೀಷ್ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು. ಸೌಜನ್ಯಕ್ಕೂ ತಮ್ಮ ಗಮನಕ್ಕೆ ವಿಷಯ ತರಲಿಲ್ಲ ಎಂದು ಸಿಟ್ಟಾಗಿದ್ದ ಅಂಬರೀಷ್ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದರು. ಆದರೆ. ಯಾವುದೇ ಸಂದರ್ಭದಲ್ಲೂ ಅಂಬರೀಷ್ ಅಧಿಕಾರಕ್ಕಾಗಿ, ಹುದ್ದೆಕ್ಕಾಗಿ ಲಾಬಿ ಮಾಡಲಿಲ್ಲ, ತಮ್ನ ಸ್ವಭಾವದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ತಮ್ಮನನವನ್ನು ಬಿಟ್ಟು ಕೊಡಲಿಲ್ಲ,
ನನ್ನ ಕೆಲಸ ಸಿದ್ದರಾಮಯ್ಯ ಅವರಿಗೆ ಸಮಾದಧಾನ ತಂದಿಲ್ಲವಂತೆ ಹೀಗಾಗಿ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದರು.
2018ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸ್ವತಃ ಸಿದ್ದರಾಮಯ್ಯ ಅವರೇ ಮನವೊಲಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗರಿಲಿಲ್ಲ.