ರೇಲಂಗಿ ಸತ್ಯವತಿ ಜತೆಗೆ ಮಹೇಶ್ ಬಾಬು 
ಸಿನಿಮಾ ಸುದ್ದಿ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುವನ್ನು ಭೇಟಿಯಾದ 106 ವರ್ಷದ ಅಭಿಮಾನಿ!

ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಲಕ್ಷ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಎಷ್ಟೋ ಮಂದಿಗೆ ಅವರನ್ನು ಭೇಟಿಯಾಗುವುದು ಸಾಧ್ಯವಾಗದೆ ಹೋಗಿದೆ. ಆದರೆ 106 ವರ್ಷದ....

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಲಕ್ಷ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಎಷ್ಟೋ ಮಂದಿಗೆ ಅವರನ್ನು ಭೇಟಿಯಾಗುವುದು ಸಾಧ್ಯವಾಗದೆ ಹೋಗಿದೆ. ಆದರೆ  106 ವರ್ಷದ ರೇಲಂಗಿ ಸತ್ಯವತಿ ಎಂಬ ಮಹಿಳೆಗೆ ಮಾತ್ರ ಸ್ತಾರ್ ನಟನೊಡನೆ ಭೇಟಿಯಾಗಿ ಮಾತುಕತೆ ನಡೆಸುವ ಸುವರ್ಣಾವಕಾಶ ದೊರಕಿತ್ತು.
ರಾಜಮಂಡ್ರಿಯಿಂದ ಮಹೇಶ್ ಬಾಬು ಅವರನ್ನು ಭೇಟಿಯಾಗುವುದಕ್ಜ್ಕೆಂದು ಬಂದಿದ್ದ ಸತ್ಯವತಿಯನ್ನು ಕಂಡು ನಟ ಆಕೆಯ ನಿರ್ಧಾರದಿಂಡ ನಿಜಕ್ಕೂ ಅಚ್ಚರಿಗೊಂಡರು. ಅಲ್ಲದೆ ಆಕೆಯೊಡನೆ ಭೇಟಿಯಾದ ಬಳಿಕ ನಟ ಸಾಮಾಜಿಕ ತಾಣದಲ್ಲಿ ಭಾವನಾತ್ಮಕವಾಗಿ ಸಂದೇಶವನ್ನೂ ಹಾಕಿದ್ದಾರೆ. ಇಸ್ ಸ್ಟಾಗ್ರಾಮ್ ನಲ್ಲಿ ಮಹೇಶ್ ಬಾಬು ಸತ್ಯವತಿಯ ಭೇಟಿ ಬಗ್ಗೆ ಬರೆದುಕೊಂಡಿದ್ದಾರೆ.
"ಪ್ರೀತಿಯು ವಯಸ್ಸಿನ ಅಂತರವನ್ನೂ ಹೇಗೆ ತೊಡೆದುಹಾಕಬಲ್ಲದು, ನನ್ನ ಅಭಿಮಾನಿಗಳು ನನ್ನ ಮೇಲಿಟ್ಟ ಪ್ರೀತಿ ನನ್ನನ್ನು ಯಾವಾಗಲೂ ಬಂಧಿಯನ್ನಾಗಿಸುತ್ತದೆ, ಆದರೆ 106 ವರ್ಷದ ರೇಲಂಗಿ ಸತ್ಯವತಿ ದೂರದ ರಾಜಮಂಡ್ರಿಯಿಂದ ನನ್ನನ್ನು ಕಾಣಲು ಬಂದ ವೇಳೆ ನನ್ನ ಹೃದಯದ ನಾಲ್ಕು ಮೂಲೆಗಳನ್ನೂ ಸ್ಪರ್ಶಿಸಿದ್ದರು. ನಾನು ಆಕೆಗೆ ಸಂತೋಷ ನೀಡಲು ಸಾಧ್ಯವಾಗಿದೆ ಎನ್ನುವುದು ನನಗೆ ಅತ್ಯಂತ ಸಂತಸದ ವಿಚಾರ, ಆದರೆ ಪ್ರಾಂಆಣಿಕವಾಗಿ ಹೇಳಬೇಕಾದರೆ ಆಕೆಯಿಂದ ನಾನು ಹೆಚ್ಚು ಸಂತಸ ಹೊಂದಿದ್ದೇನೆ. ದೇವರು ಅವರನ್ನು ಚೆನ್ನಾಗಿಡಲಿ.ಆಕೆಯ ಪ್ರೀತಿ, ಆತ್ಮೀಯತೆಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು."

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ