ಸಿನಿಮಾ ಸುದ್ದಿ

ಪ್ರಸಿದ್ಧ ತೆಲುಗು ನಿರ್ದೇಶಕರ ಮುಂದಿನ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ

Shilpa D
ಬೆಂಗಳೂರು: 2019ರ ಜನವರಿಯಿಂದ ನಟ ನಿಖಿಲ್ ಕುಮಾರ್ ಫುಲ್ ಬ್ಯುಸಿ ಆಗಲಿದ್ದಾರೆ. ನಿಖಿಲ್ ಕೈತುಂಬಾ ಹಲವು ಸಿನಿಮಾಗಳಿವೆ, ಕೇವಲ ಎರಡು ಸಿನಿಮಾಗಳಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಈ ಬಗ್ಗೆ ಹೊಸ ವರ್ಷದಂದು ನಿಖಿಲ್ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.
ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಕನ್ನಡ ಮೊದಲ ಸಿನಿಮಾದಲ್ಲಿ ನಿಖಿಲ್ ನಟಿಸಲಿದ್ದಾರೆ.
ಇನ್ನೂ ಸೀತಾರಾಮ ಕಲ್ಯಾಣ ನಿರ್ದೇಶಕ ಎ. ಹರ್ಷ ಅವರ ಜೊತೆ ನಿಖಿಲ್ ಎರಡನೇ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.  ನಿರ್ದೇಶಕ ಹರ್ಷ ನಿಖಿಲ್ ಗಾಗಿ ವಿಭಿನ್ನ ಕಥೆ ತಯಾರಿಸುತ್ತಿದ್ದಾರೆ, ಆದರೆ ಸದ್ಯದ ಪ್ರಶ್ನೆ ಎಂದರೇ ನಿಖಿಲ್ ಮುಂದಿನ ಸಿನಿಮಾವನ್ನು ಚೆನ್ನಾಂಬಿಕಾ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತದೆಯೇ ಅಥವಾ ಹೊಸ ನಿರ್ಮಾಪಕರನ್ನು ಕರೆ ತರಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ನಿಖಿಲ್ ಅಭಿನಯದ 2ನೇ ಸಿನಿಮಾ ಸೀತಾರಾಮ ಕಲ್ಯಾಣ ಜನವರಿಯಲ್ಲಿ ರಿಲೀಸ್ ಆಗಲಿದೆ. ಯಾವ ಡೇಟ್ ಎಂಬ ಬಗ್ಗೆ ಇನ್ನು ನಿರ್ಧಾರವಾಗಿಲ್ಲ, 
SCROLL FOR NEXT