ಬೆಂಗಳೂರು: ಬಿಎಸ್ ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ ಸಿನಿಮಾದಲ್ಲಿ ಶೃತಿ ಹರಿಹರನ್ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಸದ್ಯ ಶೃತಿ ಬದಲು ರಾಶಿ ಮಹದೇವ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕರೇ ತಿಳಿಸಿದ್ದಾರೆ.
ರಾಶಿ, ಈ ಹಿಂದೆ ವಿಜಯ್ ರಾಘವೇಂದ್ರ ನಟನೆಯ ಪರದೇಶಿ c/o ಲಂಡನ್ ಸಿನಿಮಾದಲ್ಲಿ ನಟಿಸಿದ್ದು, ಇದು ಆಕೆಯ ಎರಡನೇ ಸಿನಿಮಾವಾಗಿದೆ, ನಾಯಕಿ ಆಯ್ಕೆಯನ್ನು ನಿರ್ಮಾಪಕರು ಫೈನಲ್ ಮಾಡಿದ್ದಾರೆ, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ,
ನವೆಂಬರ್ ನಲ್ಲಿ ಸಿನಿಮಾ ಆರಂಭಿಸುವ ಯೋಜನೆ ಇತ್ತು, ಆದರೆ ಕಾರಣಾಂತರಗಳಿಂದ ಶೂಟಿಂಗ್ ಮುಂದೂಡಲಾಗಿದೆ, ಸಿನಿಮಾದಲ್ಲಿ ರಾಶಿ ಮಲೆನಾಡಿನ ಮಾರ್ಡನ್ ಯುವತಿ ಪಾತ್ರದಲ್ಲಿ ನಟಿಸಿದ್ದಾರೆ, ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ, ಚಿಕ್ಕಮಗಳೂರು, ಕಾರ್ಕಳ, ತೀರ್ಥಹಳ್ಳಿ ಸುತ್ತಮುತ್ತ ಶೂಟಿಂಗ್ ನಡೆಯಲಿದೆ.