ಬೆಂಗಳೂರು: ತೆರೆಯ ಮೇಲೆ ಜೋಡಿಯಾಗಿ ಮೋಡಿ ಮಾಡಿದ್ದ ಅಂಬರೀಷ್-ಸುಮಲತಾ ನಂತರ ನಿಜ ಜೀವನದಲ್ಲಿಯೂ ಸತಿ-ಪತಿಗಳಾಗಿ ಅಭಿಮಾನಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು.
ಕಳೆದ ವಾರವಷ್ಟೇ ಮೃತಪಟ್ಟ ಅಂಬರೀಷ್ ಅವರು ಹಿಂದೊಮ್ಮೆ ತಮ್ಮ ಮನೆಯಲ್ಲಿ ಪತ್ನಿ ಸುಮಲತಾ ಜೊತೆಗೆ ಹಳೆಯ ತಮಿಳು ಚಿತ್ರ ಗೀತೆಗೆ ಡ್ಯಾನ್ಸ್ ಮಾಡಿದ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅವರ ಅಭಿಮಾನಿಗಳು ವಿಡಿಯೊ ನೋಡಿ ಒಂದೆಡೆ ಖುಷಿಯಿಂದ ನಗುತ್ತಿದ್ದರೆ ಇನ್ನೊಂದೆಡೆ ಅಗಲಿದ ತಮ್ಮ ನೆಚ್ಚಿನ ನಾಯಕನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.