ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ರೆಬೆಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿರುವ ಬಗ್ಗೆ ಇದುವರೆಗೂ ಗೊತ್ತೆ ಇರಲಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಅಂಬಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇಂದು ಅಂಬರೀಶ್ ನಿಧನ ಕುರಿತಂತೆ ಟ್ವೀಟ್ ಮಾಡಿರುವ ಹರ್ಷಿಕಾ ಪೂಣಚ್ಚ ಅವರು ಇಂದು ನನ್ನ ಅತ್ಯಂತ ದುಃಖದ ದಿನ ನಾನು ಒಂದು ಚಿತ್ರದ ಚಿತ್ರೀಕರಣಕ್ಕಾಗಿ 23ರಿಂದ ನೆಟ್ ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಶ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು. ನಾನು ಎಂಥ ದುರದೃಷ್ಟವಂತೆ, ಅವರನ್ನು ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದು ಅಂಬಿ ಅಭಿಮಾನಿಗಳನ್ನು ಕೆರಳಿಸಿದೆ.
ಇನ್ನು 25ರಂದು ಟ್ವೀಟ್ ಮಾಡಿದ್ದ ಹರ್ಷಿಕಾ ಪೂಣಚ್ಚ ಅವರು ಅಂಬರೀಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು ಇದನ್ನು ಅಂಬಿ ಅಭಿಮಾನಿಗಳು ಟ್ವೀಟ್ ಮಾಡುತ್ತಾ ಹರ್ಷಿಕಾ ವಿರುದ್ಧ ಕಿಡಿಕಾರಿದ್ದಾರೆ.