ಸಿನಿಮಾ ಸುದ್ದಿ

ರಜನಿ' ಅಭಿಯನದ 2.0 ಚಿತ್ರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ

Nagaraja AB

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿಯನದ  ಬಹುನಿರೀಕ್ಷಿತ 2.0 ಚಿತ್ರ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ,  ಇತ್ತೀಚಿಗೆ ರೆಬೆಲ್ ಸ್ಟಾರ್ ಅಂಬರೀಷ್ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ರಜನಿ  ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯ ಕಂಡುಬರುತ್ತಿದೆ.

ಅಂಬರೀಷ್ ಹಾಗೂ ರಜನಿಕಾಂತ್ ಉತ್ತಮ ಗೆಳೆಯರಾಗಿದ್ದರು.  ಅಂಬಿ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಬಂದಿದ್ದ ರಜನಿಕಾಂತ್, ತಮ್ಮ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಮಾಡದಂತೆ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದರು. ಈ ಕರೆಗೆ ಹೂಗಟ್ಟ ಅಭಿಮಾನಿಗಳು ಕೂಡಾ  ಯಾವುದೇ ಆಚರಣೆ ಮಾಡುತ್ತಿಲ್ಲ.

 ಬಾಲಿವುಡ್ ನಟ ಅಕ್ಷಯ್ ಕುಮಾರ್, ಜೊತೆಗೆ ರಜನಿಕಾಂತ್ ನಟಿಸಿರುವ ಈ ಚಿತ್ರವನ್ನು  ಶಂಕರ್ ನಿರ್ದೇಶಿಸಿದ್ದು, ತಮಿಳು, ತೆಲುಗು, ಹಿಂದಿಯಲ್ಲಿ 2ಡಿ, 3ಡಿ ಆವೃತ್ತಿ ಸೇರಿದಂತೆ  ಬೆಂಗಳೂರು ಒಂದರಲ್ಲಿ 950ಕ್ಕೂ ಹೆಚ್ಚು  ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ಹೊರತುಪಡಿಸಿದಂತೆ ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ  ಚಿತ್ರ ಪ್ರದರ್ಶನ ಕಾಣುತ್ತಿದೆ.

ಬೆಂಗಳೂರಿನಲ್ಲಿ  ತಮಿಳು ವರ್ಸನ್ ವೊಂದರಲ್ಲಿಯೇ  700 ಪ್ರದರ್ಶನ ಕಾಣುತ್ತಿದೆ. ಜೊತೆಗೆ ಹಿಂದಿ ಮತ್ತು ತೆಲುಗು ವರ್ಸನ್ ನಲ್ಲಿ  200ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಕಂಡುಬರುತ್ತಿದೆ.
ಟಿಕೆಟ್ ದರ ಕನಿಷ್ಠ 200 ರಿಂದ ಆರಂಭವಾಗಿ ಮಲ್ಟಿಫ್ಲೇಕ್ಸಸ್ ಗಳಲ್ಲಿ ಗೋಲ್ಡ್ ಕ್ಲಾಸ್ ಟಿಕೆಟಿನ ಬೆಲೆ 1700 ರೂ. ಆಗಿದೆ. ಮುಂದಿನ ವಾರವೂ ಇದೇ ಪ್ರದರ್ಶನ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
SCROLL FOR NEXT