2ನೇ ಹಂತದ ಶೂಟಿಂಗ್ ಗೆ ಭರಾಟೆ ಚಿತ್ರತಂಡ ಸಿದ್ಧ!
ರಾಜಸ್ತಾನದ ವಿವಿಧ ಭಾಗಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಭರಾಟೆ ಚಿತ್ರ ತಂಡ ಇಂದಿನಿಂದ 2ನೇ ಹಂತದ ಶೂಟಿಂಗ್ ಆರಂಭಿಸಿದೆ
ಬೆಂಗಳೂರು : ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರ ರಾಜಸ್ತಾನದ ವಿವಿಧ ಭಾಗಗಳಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಭರಾಟೆ ಚಿತ್ರ ತಂಡ ಇಂದಿನಿಂದ 2ನೇ ಹಂತದ ಶೂಟಿಂಗ್ ಆರಂಭಿಸಿದೆ,. ಇಂದಿನಿಂದ ಮಂಡ್ಯದಲ್ಲಿ ಶ್ರೀಮುರುಳಿ ನಟನೆ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ,.
ಸ್ಟಂಟ್ ಮಾಸ್ಟರ್ ಗಣೇಶ್ ಕೆಲಸ ನಿರ್ವಹಿಸಿದ್ದಾರೆ, ಶ್ರೀ ಮುರುಳಿ ಜೊತೆ ಪೆಟ್ರೋಲ್ ಪ್ರಸನ್ನ, ಮೈಕೋ ನಾಗರಾಜ್, ಮುಂತಾದವರು ಪಾತ್ರ ವಹಿಸಿದ್ದಾರೆ. ಮೊದಲ ಹಂತದಲ್ಲಿ ಸಂಭಾಷಣೆಯ ಭಾಗ ಮುಗಿದಿದ್ದು, ಶ್ರೀಲೀಲಾ ನಾಯಕಿಯಾಗಿ, ನಟಿಸಿದ್ದಾರೆ.
ಸುಪ್ರಿತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಕೆ.ರವಿವರ್ಮ, ಗಣೇಶ್, ವಿಜಯ್ ಸಾಹಸ ನಿರ್ದೇಶನ ಹಾಗೂ ಎ.ಹರ್ಷ, ಇಮ್ರಾನ್ ಸರ್ದಾರಿಯಾ, ಮುರಳಿ ನೃ ತ್ಯ ನಿರ್ದೇಶನವಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.