ಧ್ರುವ ಸರ್ಜಾ 
ಸಿನಿಮಾ ಸುದ್ದಿ

ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ 'ಪೊಗರು' ಗ್ರ್ಯಾಂಡ್ ಟೀಸರ್

ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಈ ಬಾರಿಯ ಅವರ ಜನ್ಮದಿನಕ್ಕೆ ಧ್ರುವ ಸರ್ಜಾ ಅಭಿಮಾನಿಗಳಿಗೆ ದೊಡ್ಡ ಉಡುಗೊರೆಯೇ....

ಬೆಂಗಳೂರು: ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಈ ಬಾರಿಯ ಅವರ ಜನ್ಮದಿನಕ್ಕೆ ಧ್ರುವ ಸರ್ಜಾ ಅಭಿಮಾನಿಗಳಿಗೆ ದೊಡ್ಡ ಉಡುಗೊರೆಯೇ ಕಾದಿದೆ. ನಂದ ಕಿಶೋರ್ ನಿರ್ದೇಶನದ "ಪೊಗರು" ಚಿತ್ರತಂಡ ನಟನ ಜನ್ಮದಿನಕ್ಕೆ ಸರಿಯಾಗಿ ಚಿತ್ರದ ಗ್ರ್ಯಾಂಡ್ ಟೀಸರ್ ಬಿಡುಗಡೆಗೊಳಿಸಲು ಸಿದ್ದವಾಗಿದೆ.
ಸುಮಾರು 150 ಕಿರಿಯ ಕಲಾವಿದರ ತಂಡವಿರುವ ಈ ಟೀಸರ್ ಗಾಗಿ  10 ಲಕ್ಷ ರೂ ವೆಚ್ಚವಾಗಿದೆ! ಭುವನ್ ಗೌಡ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಸುಮಾರು 50 ಫೈಟರ್ ಗಳನ್ನು ಬಳಸಿಕೊಳ್ಳಲಾಗಿದೆ.
ಟೀಸರ್ ನಲ್ಲಿ ರ್ಯಾಪರ್ ಚಂದನ್ ಶೆಟ್ಟಿ "ಪೊಗರು" ಚಿತ್ರಕ್ಕಾಗಿ ತಯಾರಿಸಿದ ವಿಶೇಷ ಥೀಮ್ ಸಾಂಗ್ ಅಳವಡಿಸಲಾಗಿದೆ.ಧ್ರುವ ಸರ್ಜಾ ಅವರ ಫಸ್ಟ್ ಲುಕ್ ಹೊರತರುವ ನಿಮಿತ್ತ ಬಹಳಷ್ಟು ಕೆಲಸಗಳಿದೆ ಎಂದು ಚಿತ್ರ ನಿರ್ದೇಶಕ ನಂದ ಕಿಶೋರ್ ಹೇಳುತ್ತಾರೆ.
ಅರ್ಜುನ್ ಸರ್ಜಾ  ಬರೆದ ಕಥೆಯನ್ನು ಗಂಗಾಧರ್ ನಿರ್ಮಾಣ ಮಡುತ್ತಿದ್ದಾರೆ.  ಅರ್ಜುನ್ ಜನ ಮತ್ತು ಸತ್ಯ ಹೆಗ್ಡೆ ಅವರನ್ನು ತಂತ್ರಜ್ಞರನ್ನಾಗಿ ಹೊಂದಿರುವ ಈ ಚುತ್ರಕ್ಕೆ ನಾಯಕಿ ಸೇರಿ ಇತರೆ ಪಾತ್ರಗಳಿಗೆ ಇನ್ನೂ ಆಯ್ಕೆಗಳು ನಡೆಯಬೇಕಿದೆ. ಚಿತ್ರದ ಮುಂದಿನ ಹಂತದ ಕೆಲಸ ಅಕ್ಟೋಬರ್ ತಿಂಗಳಿನಲ್ಲೇ ಪ್ರಾರಂಬವಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ