ಧೀರೆನ್ ಕುಮಾರ್ 
ಸಿನಿಮಾ ಸುದ್ದಿ

ಚಿತ್ರರಂಗಕ್ಕೆ ರಾಜ್ ಕುಟುಂಬ ಇನ್ನೊಂದು ಕುಡಿ: ರಾಮ್ ಕುಮಾರ್ ಪುತ್ರ ಧೀರೆನ್ ಚಿತ್ರಕ್ಕೆ ಅನಿಲ್ ನಿರ್ದೇಶನ!

ರಾಜ್ ಕುಮಾರ್ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದೆ. ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ಪುತ್ರ ಧೀರೆನ್ ಕುಮಾರ್....

ಬೆಂಗಳೂರು: ರಾಜ್ ಕುಮಾರ್ ಕುಟುಂಬದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದೆ. ಪೂರ್ಣಿಮಾ ಹಾಗೂ ನಟ ರಾಮ್ ಕುಮಾರ್ ಪುತ್ರ ಧೀರೆನ್ ಕುಮಾರ್ ತಾವು ಚಿತ್ರರಂಗ ಪ್ರವೇಶಿಸಲು ಹಲವು ತಿಂಗಳುಗಳಿಂದ ಪ್ರಯತ್ನ ನಡೆಸಿದ್ದು ಅಂತಿಮವಾಗಿ ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸಿದ್ದಾರೆ.
ರ್ಯಾಂಬೋ 2, ಯಶ್ ಅಭಿನಯದ ಮೈ ನೇಮ್ ಈಸ್ ಕಿರಾತಕ ಚಿತ್ರಗಳ ನಿರ್ದೇಶಕರಾದ ಅನಿಲ್ ಧೀರೆನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ. ಸೂರಿ ಹಾಗೂ ಜಯಣ್ಣ ಈ ಚಿತ್ರಕ್ಕೆ ಬಂಡವಾಳ ತೊಡಗಿಸಲಿದ್ದಾರೆ ಇನ್ನೂ ಒಂದು ಅಥವಾ ಒಂದೂವರೆ ತಿಂಗಳಲ್ಲಿ ಧೀರೆನ್  ನಾಯಕನಾಗಿರುವ ಚಿತ್ರದ ಯೋಜನೆ ಸಿದ್ದವಾಗಲಿದ್ದು ಯಶ್ ಚಿತ್ರದ ಕೆಲಸಗಳೆಲ್ಲಾ ಮುಗಿದ ನಂತರ ನಿರ್ದೇಶಕ ಅನಿಲ್ ಈ ಚಿತ್ರದ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಮೂಲಗಳು ಏಳಿದೆ.
ಧೀರೆನ್ ತಾವು ಸರಿಯಾದ ಚಿತ್ರಕಥೆಗಾಗಿ ಕಳೆದ ಕೆಲ ದಿನಗಳಿಂದ ಹುಡುಕಾಟದಲ್ಲಿದ್ದಾರೆ.ತಮ್ಮ ಇತ್ತೀಚಿನ ಸಂದರ್ಶ್ನವೊಂದರಲ್ಲಿ ಅವರು ತಾವು ಸದ್ಯದಲ್ಲೇ ಚಿತ್ರರಂಗಕ್ಕೆ ಪ್ರವೇಶಿಸುವ ಸೂಚನೆ ನೀಡಿದ್ದರು. ಇದೇ ವೇಳೆ ರಾಘವೇಂದ್ರ ರಾಜ್ ಕುಮಾರ್ ಪ್ರಥಮ ಪುತ್ರ ವಿನಯ್ ರಾಜ್ ಕುಮಾರ್ ಇದಾಗಲೇ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಮಾಸ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದೀಗ ಅವರ ದ್ವಿತೀಯ ಪುತ್ರ ಯುವರಾಜ್ 2019 ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ.
ತೆಲುಗಿನ ಆರ್ ಎಕ್ಸ್ 100 ರೀಮೇಕ್ ನಲ್ಲಿ ಧೀರೆನ್?
ಟಾಲಿವುಡ್ ಉತ್ತಮ ಚಿತ್ರವಾಗಿರುವ ಆರ್ ಎಕ್ಸ್ 100 ನ ರೀಮೇಕ್ ನಲ್ಲಿ ನವ ನಟ ಧೀರೆನ್  ಕಾಣಿಸಿಕೊಳ್ಳಲಿದ್ದಾರೆಯೆ ಎನ್ನುವ ಪ್ರಶ್ನೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ.ಇನ್ನು ಇದಾಗಲೇ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗನಾದ ಅಹಾನ್ ಗಾಗಿ ಇದೇ ಚುತ್ರದ ಹಿಂದಿ ಅವತರಣಿಕೆಯನ್ನು ಸಜೀದ್ ನದಿಯಾದ್ವಾಲಾ ತಯಾರಿಸುತ್ತಿದ್ದಾರೆ. ಇದೀಗ ಜಯಣ್ಣ ಧೀರೆನ್ ಗಾಗಿ ಇದೇ ಚಿತ್ರದ ಕನ್ನಡ ಹಕ್ಕುಗಳನ್ನು ಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಎಷ್ಟು ಸತ್ಯ ಎನ್ನುವುದನ್ನು ತಿಳಿಯಲು ನಾವಿನ್ನೂ ಕೆಲ ಸಮಯ ತಾಳ್ಮೆಯಿಂದ ಕಾಯಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT