ನಟಿ ಸೋಹಾ ಅಲಿ ಖಾನ್ 
ಸಿನಿಮಾ ಸುದ್ದಿ

ಭಾರತದಲ್ಲಿ ಮಹಿಳೆಯಾಗಿರುವುದು ಅತ್ಯಂತ ಕಷ್ಟಕರ: ನಟಿ ಸೋಹಾ ಅಲಿ ಖಾನ್

ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಅವರಿಗೆ ನಟಿ ಸೋಹಾ ಅಲಿ ಖಾನ್ ಮಂಗಳವಾರ ಬೆಂಬಲ ನೀಡಿದ್ದಾರೆ...

ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಅವರಿಗೆ ನಟಿ ಸೋಹಾ ಅಲಿ ಖಾನ್ ಮಂಗಳವಾರ ಬೆಂಬಲ ನೀಡಿದ್ದಾರೆ. 
ರೇಡಿಯೋ ಶೋ 'ನೋ ಫಿಲ್ಟರ್ ನೇಹಾ ಸೀಸನ್ 3' ಕುರಿತಂತೆ ನೇಹಾ ದೂಪಿಯಾ, ಸೋಫೀ ಚೌಧರಿ, ಅಂಗದ್ ಬೇಡಿ ಹಾಗೂ ಗೌರವ್ ಕಪೂರ್ ಅವರು ನಡೆಸುತ್ತಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಸೋಹಾ ಅಲಿ ಖಾನ್ ಅವರು ತನುಶ್ರೀ ದತ್ತಾ ಅವರಿಗೆ ಬೆಂಬಲ ನೀಡಿದ್ದಾರೆ. 
#MeToo ಅಭಿಯಾನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಹಿಳೆಯರು ಮಾತನಾಡುತ್ತಿರುವುದು ನಿಜಕ್ಕೂ ಸಂತಸವನ್ನು ತಂದಿದೆ. ಭಾರತದಂತಹ ರಾಷ್ಟ್ರದಲ್ಲಿ ಮಹಿಳೆಯರು ಪ್ರತೀ ನಿತ್ಯ ಸಂಕಷ್ಟಗಳೊಂದಿಗೆ ಜೀವನ ನಡೆಸುವುದು ಬಹಳ ಕಷ್ಟ ಎಂದು ಹೇಳಿದ್ದಾರೆ. 
ಇಂತಹ ದನಿಗಳು ಸಾಕಷ್ಟು ಎದ್ದುನಿಲ್ಲಲು ಸಾಕಷ್ಟು ಧೈರ್ಯವನ್ನು ನೀಡುತ್ತದೆ. ನನ್ನ ಕಥೆಯನ್ನೂ ಹೇಳಿಕೊಳ್ಳಬೇಕೆಂದು ಎನಿಸುತ್ತದೆ. ಮಹಿಳೆಯರಿಗೆ ಬೆಂಬಲ ಹಾಗೂ ಧೈರ್ಯವನ್ನು ನೀಡಬೇಕು ಯಾವುದೇ ಮಹಿಳೆಯರು ತಮ್ಮ ಕಥೆಯನ್ನು ಹಂಚಿಕೊಳ್ಳಲು ಬಯಸಿದರೆ ಅಂತಹವರಿಗೆ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆಂದು ತಿಳಿಸಿದ್ದಾರೆ. 
ನಂತರ ಮಾತನಾಡಿರುವ ನೇಹಾ ದೂಪಿಯಾ ಅವರು, ಕೇವಲ ನಟಿಯಾಗಿ ಅಷ್ಟೇ ಅಲ್ಲ, ಮಹಿಳೆಯಾಗಿ ಇಂತಹ ಕಥೆಗಳನ್ನು ಓದಿದಾಗ ಹಾಗೂ ಕೇಳಿದಾಗ ಬಹಳ ಕೋಪ ಬರುತ್ತದೆ. ಕೆಲವೊಮ್ಮೆ ಜನರು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಅವರನ್ನು ನಾವು ನಂಬಬೇಕು ಎಂದು ಹೇಳಿದ್ದಾರೆ. 
ಸೋಫಿ ಚೌಧರಿ ಮಾತನಾಡಿ, ಈ ವಿಚಾರದ ಬಗ್ಗೆ ಬಾಯಿಬಿಡಲು ತನುಶ್ರೀಯವರಿಗೆ 10 ವರ್ಷಗಳ ಸಮಯವೇಕೆ ಬೇಕಾಯಿತು ಎಂದು ಜನರು ಪ್ರಶ್ನಿಸುತ್ತಿರವುದು ನಿಜಕ್ಕೂ ಖಂಡನೀಯ. ಪ್ರಚಾರಕ್ಕಾಗಿ ಆಕೆ ಹೀಗೆಲ್ಲಾ ಮಾಡುತ್ತಿದ್ದಾಳೆಂದು ನನಗನ್ನಿಸುತ್ತಿಲ್ಲ. ತನುಶ್ರೀ ಬಗ್ಗೆ ಅಲ್ಪಸ್ವಲ್ಪವಷ್ಟೇ ಗೊತ್ತು. ಕಾರ್ಯಕ್ರಮವೊಂದರಲ್ಲಿ ಚಿತ್ರಗಳಲ್ಲಿ ನಟಿಸುವುದನ್ನು ಏಕೆ ಬಿಟ್ಟಿದ್ದೀರಿ ಎಂಬ ಪ್ರಶ್ನೆಗೆ ಆಕೆ ಮೌನ ಮುರಿದು ಮಾತನಾಡಿ ಸ್ಪಷ್ಟಪಡಿಸಿದ್ದಾಳೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT