ಸಿನಿಮಾ ಸುದ್ದಿ

'ಸೈರಾ ನರಸಿಂಹ ರೆಡ್ಡಿ' ಫಸ್ಟ್ ಲುಕ್ ಬಿಡುಗಡೆ: ಯಾರು ಈ ಬಾಲಿವುಡ್ ನಟ?

Lingaraj Badiger
ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ದಕ್ಷಿಣದತ್ತ ಮುಖ ಮಾಡಿದ್ದು, ಬಿಗ್ ಬಿ ಅಭಿನಯದ ತೆಲುಗು ಚಿತ್ರ 'ಸೈರಾ ನರಸಿಂಹ ರೆಡ್ಡಿ'ಯ ಫಸ್ಟ್ ಲುಕ್ ಅನ್ನು ಅವರ ಹುಟ್ಟು ಹಬ್ಬದಂದೆ ಬಿಡುಗಡೆ ಮಾಡಲಾಗಿದೆ.
ಅಮಿತಾಭ್ ಬಚ್ಚನ್ ಅವರು ಇಂದು 76ನೇ ವಸಂತಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 
'ಸೈರಾ ನರಸಿಂಹ ರೆಡ್ಡಿ' ಚಿತ್ರದ ನಿರ್ದೇಶಕ ಸುರೇಂದ್ರ ರೆಡ್ಡಿ ಅವರು ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಬಿಗ್ ಬಿ ಹುಟ್ಟು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಫಸ್ಟ್ ಲುಕ್ ನಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಚಿತ್ರದಲ್ಲಿ ತೆಲುಗು ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್, ನಟಿ ನಯನ ತಾರಾ, ತಮನ್ನಾ ಹಾಗೂ ಜಗಪತಿ ಬಾಬು ಅವರು ಅಭಿನಯಿಸಿದ್ದಾರೆ.
SCROLL FOR NEXT