ಶುಬ್ಬಳ್ಳಿ: "ಮೀಟೂ" ಅಭಿಯಾನ ದೇಶದ ವಿವಿಧ ಕ್ಷೇತ್ರಗಳ ಗಣ್ಯರ ನಿದ್ದೆಗೆಡಿಸಿದೆ. ಬಾಲಿವುಡ್ನಟ ನಟಿಯರು ಈ ಕುರಿತಂತೆ ಬೆಂಬಲ ಸೂಚಿಸಿದ್ದಾರೆ. ಇದೀಗ ಕನ್ನಡ ನಟಿ ಶೃತಿ ಹರಿಹರನ್ ಸಹ "ಮೀಟೂ" ಬಗೆಗೆ ಮಾತನಾಡಿದ್ದಾರೆ.
"ಮೀಟೂ ಅಭಿಯಾನದ ಬಗ್ಗೆ ಖುಷಿಯಾಗುತ್ತಿದೆ. ಈಗಲಾದರೂ ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹವಾಗಿದೆ. ಈ ಅಭಿಯಾನದಲ್ಲಿ ದೊಡ್ಡ್ ದೊಡ್ಡ್ವರ ಹೆಸರು ಕೇಳಿಬರುತ್ತಿದೆ" ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ನಟಿ ಶೃತಿ ಹೇಳಿದ್ದಾರೆ.
"ಮೀಟೂ ಅಭಿಯಾನ ಗೇಮ್ ಚೇಂಜರ್ ಆಗಿ ಬದಲಾಗಲಿದೆ".ಎಂದು ಅಭಿಪ್ರಾಯಪಟ್ಟಿರುವ ನಟಿ ಯಾರು ಯಾವಗ ಹೇಳಿದ್ದಾರೆ ಎನ್ನುವುದು ಮುಖ್ಯವಲ್ಲ, ಸತ್ಯ ಎಂದಿಗೂ ಸತ್ಯವಾಗಿಯೇ ಇರುತ್ತದೆ ಎಂದಿದ್ದಾರೆ.
ಲೈಂಗಿಕ ಕಿರುಕುಳ ಸಹಿಸಿಕೊಳ್ಳುವುದು ಮಹಿಳೆಯರಿಗೆ ಕಠಿಣವಾಗಿದ್ದು ಈ ರೀತಿ ಕಿರುಕುಳ ನೀಡಿದ ಎಲ್ಲರಿಗೆ ಸಾಧ್ಯವಾಗದೆ ಹೋದರೆ ಕೆಲವರಿಗಾದರೂ ಶಿಕ್ಷೆ ಆಗಬೇಕು.ಮುಂದಿನ ದಿನಗಳಲ್ಲಿ ಇಂತಹಾ ಘಟನೆ ನಡೆಯುವುದು ತಪ್ಪಬೇಕು.ಅಧಿಕಾರ, ಹಣಬಲ ಇಂತಹಾ ಕೃತ್ಯ ನಡೆಯಲು ಕಾರಣವಾಗಿದ್ದು ಇದು ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಲ್ಲ, ಎಲ್ಲಾ ಕ್ಷೇತ್ರಗಳಲ್ಲಿ ಇಂತಹಾ ಘಟನೆಗಳು ನಡೆಯುತ್ತದೆ.ಹೀಗಾಗಿ ಇದು ಕೇವಲ ಗಂಡು-ಹೆಣ್ಣಿನ ಪ್ರಶ್ನೆಯಾಗಿ ಉಳಿದಿಲ್ಲ ಎಂದು ನಟಿ ವಿವರಿಸಿದರು.