ಸಿನಿಮಾ ಸುದ್ದಿ

ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚೆಚ್ಚು ಕನ್ನಡ ಚಿತ್ರ ಪ್ರದರ್ಶನಗೊಳ್ಳಬೇಕು: ನಟ ಶಿವರಾಜ್ ಕುಮಾರ್

Manjula VN
ಬೆಂಗಳೂರು: ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ಗಳು ತೋರುತ್ತಿರುವ ತಾರತಮ್ಯ, ಧೋರಣೆ ವಿರುದ್ಧ ನಟ ಶಿವರಾಜ್ ಕುಮಾರ್ ಅವರು ಶುಕ್ರವಾರ ಗುಡುಗಿದ್ದಾರೆ. 
20 ರಿಂದ 25 ಹಿಂದಿ ಚಿತ್ರಗಳು ಏಕಕಾಲಕ್ಕೆ ಬಂದಲೂ ಪ್ರದರ್ಶಿಸಲು ಮಲ್ಟಿಪ್ಲೆಕ್ಸ್ ಗಳಿಗೆ ಸಮಸ್ಯೆಗಳಿರುವುದಿಲ್ಲ. ಆದರೆ, ಕನ್ನಡ ಚಿತ್ರಗಳ ವಿಚಾರದಲ್ಲಿ ಮಾತ್ರ ತಾರತಮ್ಯ ಮಾಡುತ್ತವೆ. ಯಾರು ಎಲ್ಲಿಂದಲೇ ಬಂದರೂ ನಾವು ಮುಕ್ತ ಸ್ವಾಗತ ಮಾಡುತ್ತೇವೆ. ಅದೇ ರೀತಿ ಇಲ್ಲಿಗೆ ಬಂದ ಮೇಲೆ ನಮಗೂ ಮಹತ್ವ ನೀಡಬೇಕು. 
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇವೆ. ಎಲ್ಲಾ ಭಾಷೆಗಳ ಸಿನಿಮಾಗಳನ್ನು ಸ್ವಾಗತಿಸುತ್ತೇವೆ. ನಾವು ಯಾರಿಗೂ ಆದೇಶ ಮಾಡುತ್ತಿಲ್ಲ. ಮನವಿ ಮಾಡಿಕೊಳ್ಳುತ್ತಿದ್ದೇವೆ. ಪರಭಾಷಾ ಸಿನಿಮಾಗಳಿಗೆ ನೀಡುವಷ್ಟೇ ಮಹತ್ವವನ್ನು ನಮ್ಮ ಸಿನಿಮಾಗಳಿಗೂ ನೀಡಬೇಕು. ಕನ್ನಡ ಚಿತ್ರಗಳಿಗೆ ಸಮಸ್ಯೆಯಾದರೆ, ನಾನು ಮುಂದೆ ನಿಲ್ಲುತ್ತೇನೆ. ಬೇರೆ ಭಾಷೆಯವರು ಮಾತ್ರ ಸಿನಿಮಾ ಮಾಡ್ತಾ ಇರೋದಾ? ನಾವೇನು ಸಿನಿಮಾಗಳನ್ನು ಮಾಡುತ್ತಿಲ್ಲವಾ? ಎಲ್ಲರಿಗೂ ಒಂದೇ ರೀತಿ ನಿಯಮ ಅನುಸರಿಸಿ. ಕನ್ನಡ ಚಿತ್ರ ನೋಡುಗರ ಸಂಖ್ಯೆ ಕಡಿಮೆಯೆಂದು ಮಲ್ಟಿಪ್ಲೆಕ್ಸ್ ಗಳು ಏಕೆ ತಿಳಿಯುತ್ತಿವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT