ಸಾಮಾಜಿಕ ಜಾಲತಾಣದಲ್ಲಿ ಈಗ #MeToo ಅಭಿಯಾನದ್ದೇ ಸುದ್ದಿ, ಬಹುತೇಕ ಸೆಲಬ್ರಿಟಿಗಳು ಒಂದಲ್ಲಾ ಒಂದು ರೀತಿಯಲ್ಲಿ #MeToo ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಖ್ಯಾತ ನಟಿ ಖುಷ್ಬೂ ಸಹ #MeToo ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನ 40 ವರ್ಷಗಳ ಸಿನಿ ಜರ್ನಿಯಲ್ಲಿ ಇಂತದ್ದೊಂದು ಘಟನೆ ನಡೆಯಲೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದ ವ್ಯಕ್ತಿಯೊಬ್ಬರು ರವಿಚಂದ್ರನ್ ಅವರ ಹೆಸರನ್ನು ಉಲ್ಲೇಖಿಸಿ “ನೀವು ಸುಳ್ಳು ಹೇಳುತ್ತಿದ್ದೀರಾ ರವಿಚಂದ್ರನ್ ಅವರ ಜೊತೆ ಅಭಿನಯಿಸಿದ್ದೀರಾ, ಅವರು ಅಂದಿನ ಕಾಲದಲ್ಲಿ ಹೇಗಿದ್ದರು ಎಂದು ಊಹಿಸಬಹುದು ಎಂದಿದ್ದರು.
ಈ ರೀತಿ ಮಾತನಾಡಿದ ವ್ಯಕ್ತಿಗೆ ಬೆವರಿಳಿಸಿರುವ ಖುಷ್ಬೂ ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೇ ಪ್ರಚಾರಕ್ಕಾಗಿ ಏನೇನೊ ಮಾತಾಡಬೇಡಿ. ರವಿಚಂದ್ರನ್ ಎಂತಹವರು ಅಂತ ನನಗೆ ಗೊತ್ತು. ಇಂದು ನಮ್ಮ ತಾಯಿ ಬದುಕಿದ್ದರೆ ಅದಕ್ಕೆ ಅವರೇ ಕಾರಣ. ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ದರು. ಅಂತಹವರ ಕುರಿತು ಮನಸೋ ಇಚ್ಛೆ ಮಾತಾಡಬೇಡಿ” ಎಂದು ಹೇಳಿದ್ದಾರೆ.