ಮುಂಬೈ: ಇಂದು ಬೆಳಗಿನ ಜಾವ ಮುಂಬೈ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ದೇಶದ ಅತಿದೊಡ್ಡ ಸೆಲೆಬ್ರಿಟಿ ನಿರ್ವಹಣಾ ಏಜೆನ್ಸಿ ಕ್ವಾನ್ ಎಂಟರ್ ಟೈನ್ ಮೆಂಟ್ ಸಹ ಸಂಸ್ಥಾಪಕ ಮಿಟೂ ಆರೋಪಿ ಅನಿರ್ಬಾನ್ ಬ್ಲಾಹ್ ಅವರನ್ನು ಪ್ರಾಣಪಾಯದಿಂದ ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಬೆಳಗ್ಗೆ 12-30 ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಆಪಾದಿತ ಅನಿರ್ಬಾನ್ ಬ್ಲಾಹ್ ಆತ್ಮಹತ್ಯೆಯ ಬಗ್ಗೆ ಸುಳಿವು ಪಡೆದ ಸಂಚಾರಿ ಪೊಲೀಸರು ಕೂಡಲೇ ಅಲ್ಲಿಗೆ ಧಾವಿಸಿದ್ದು, ಆತನನ್ನು ಕಾಪಾಡಿದ್ದಾರೆ ಎನ್ನಲಾಗಿದೆ.
ಅನಿರ್ಬಾನ್ ಬ್ಲಾಹ್ ಕ್ವಾನ್ ಎಂಟರ್ ಟೈನ್ ಮೆಂಟ್ ಸಹ ಸಂಸ್ಥಾಪಕರಾಗಿದ್ದು, ಇತ್ತೀಚಿಗೆ ಅವರ ವಿರುದ್ದ ಕೆಲ ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆ ಸಂಸ್ಥೆಯಿಂದ ಆತನನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು.
ಆತ್ಮಹತ್ಯೆ ಮಾಡಿಕೊಳ್ಳಲು ವಶಿ ಸೇತುವೆ ಕಡೆಗೆ ಒಬ್ಬರೇ ಬರುತ್ತಿದ್ದ ಬಗ್ಗೆ ಮಾಹಿತಿ ಪಡೆದೇವು. ಕತ್ತಲಿನಲ್ಲಿಯೇ ಒಂದು ಬದಿಯಲ್ಲಿ ನಿಂತು ಆತ ಆತ್ಮಹತ್ಯೆ ಮಾಡಿಕೊಳ್ಳದಂತೆ ರಕ್ಷಿಸಲಾಯಿತು ಎಂದು ವಶಿ ಟ್ರಾಫಿಕ್ ನ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ವಶಿ ಸೇತುವೆ ಬ್ಯಾರಿಕೇಡ್ ಏರಿದ ಅನಿರ್ಬಾನ್ ಬ್ಲಾಹ್ ನನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಕೆಳಗಿಳಿಸಿ ಠಾಣೆಗೆ ಕರೆದುಕೊಂಡು ಬರಲಾಯಿತು. ಆತ ಮಾನಸಿಕವಾಗಿ ಕುಗ್ಗಿದ್ದು, ಹತಾಶ ಪರಿಸ್ಥಿತಿಯಲ್ಲಿದದ್ದು ಕಂಡುಬಂದಿತು. ನಂತರ ನೀರು ಕೊಟ್ಟಿ ಕೇಳಿದಾಗ ಮಿಟೂ ಆರೋಪದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ವಿಷಯ ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.