ನಟ ರಾಜೇಶ್ ಮತ್ತು ಅರ್ಜುನ್ ಸರ್ಜಾ
ಬೆಂಗಳೂರು: ನಟ ಹಾಗೂ ತಮ್ಮ ಅಳಿಯ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ಮತ್ತೊಮ್ಮೆ ಹಿರಿಯ ನಟ ರಾಜೇಶ್ ನಿಂತಿದ್ದು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಗೃಹಿಣಿಯ ವಿರುದ್ಧ ಕಿಡಿಕಾರಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಮಹಿಳೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಟ ರಾಜೇಶ್, 15 ವರ್ಷ ಈ ಘಟನೆ ನಡೆದಿದೆ. ಆಗ ಪೊಲೀಸರಿಗೆ, ಕಲಾವಿದರ ಸಂಘದವರಿಗೆ ಮತ್ತು ಚೇಂಬರಿಗೆ ದೂರು ಕೊಡಬಹುದಿತ್ತು. ಆಗ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.
'ಶೂಟಿಂಗ್ ನಲ್ಲಿ ನಿರ್ದೇಶಕರು, ನಿರ್ಮಾಪಕರು ಇರುತ್ತಾರೆ. ಅವರ ಬಳಿ ಹೋಗಿ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರ ಕೊಡಬೇಕಿತ್ತು ಎಂದರು. ಈ ವೇಳೆ ಗೃಹಿಣಿ ಆಗ ನನಗೆ ಧೈರ್ಯ ಇರಲಿಲ್ಲ ಎಂದು ಹೇಳಿದರು. ಈ ವೇಳೆ ಗೃಹಿಣಿ ವಿರುದ್ಧ ಗರಂ ಆದ ರಾಜೇಶ್ ಅವರು ಧೈರ್ಯ ಇಲ್ಲ ಎಂದ ಮೇಲೆ ಚಿತ್ರರಂಗಕ್ಕೆ ಯಾಕೆ ಬಂದ್ರಿ, ಮನೆಯಲ್ಲಿ ಇರಬೇಕು. #ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ನಿಮ್ಮ ರೆಕ್ಕೆ ಪುಕ್ಕ. #ಮೀಟೂ ಬಂದು ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ಎಂದು ಗೃಹಿಯ ವಿರುದ್ಧ ಗುಡುಗಿದ್ದಾರೆ.