ಸಿನಿಮಾ ಸುದ್ದಿ

ಸನ್ನಿ ಬೆಂಗಳೂರು ಭೇಟಿಗೆ ಕನ್ನಡ ಸಂಘಟನೆ ವಿರೋಧ: 'ವೀರಮಹಾದೇವಿ' ವಿರುದ್ಧ 'ಪದ್ಮಾವತ್' ನಂತೆ ಪ್ರತಿಭಟನೆ ಎಚ್ಚರಿಕೆ!

Raghavendra Adiga
ಬೆಂಗಳೂರು: ಮಾಜಿ ನೀಲಿ ಚಿತ್ರನಟಿ ಸನ್ನಿ ಲಿಯೋನ್ ಬೆಂಗಳೂರು ಭೇಟಿ ವಿರೋಧಿಸಿ ಹಾಗೂ ಬಹು ಭಾಷೆಯಲ್ಲಿ ತೆರೆ ಕಾಣುತ್ತಿರುವ "ವೀರಮಾದೇವಿ" ಚಿತ್ರದಲ್ಲಿ ಆಕೆ ಅಭಿನಯಿಸುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಯ ಸದಸ್ಯರು ಬೆಂಗಳೂರಿನ ಟೌನ್ ಹಾಲ್ ಮುಂದೆ ಇಂದು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಒಂದು ವೇಳೆ ಆಕೆ ಬೆಂಗಳೂರಿಗೆ ಭೇಟಿ ನೀಡಿದ್ದಾದರೆ, "ವೀರಮಾದೇವಿ" ಯಲ್ಲಿ ಕಾಣಿಸಿಕೊಂಡಿದ್ದಾದರೆ ತಾವು "ಪದ್ಮಾವತ್" ತರಹದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ನವೆಂಬರ್ 3ರಂದು ಸನ್ನಿ ಲಿಯೋನ್‌ ಬೆಂಗಳೂರಿನಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.ಇದಕ್ಕಾಗಿ ಇದಾಗಲೇ ಭಾರೀ ಸಂಖ್ಯೆಯ ಟಿಕೆಟ್ ಮಾರಾಟವಾಗಿದೆ. ಆದರೆ ಇದೀಗ ಕನ್ನಡ ಸಂಘಟನೆಗಳು ಸನ್ನಿ ಆಗಮನ ವಿರೋಧಿಸಿ ರಸ್ತೆಗಿಳಿದಿದ್ದಾರೆ.
ಇಂದಿನ ಪ್ರತಿಭಟನೆಯಲ್ಲಿ ತಮ್ಮ ಉದ್ದೇಶದತ್ತ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಡದಿಂದ ಕೆಲ ಕಾರ್ಯಕರ್ತರು ತಮ್ಮ ಕೈ ಬೆರಳನ್ನು ಬ್ಲೇಡ್ ನಿಂದ ಕುಯ್ದುಕೊಂಡಿದ್ದಾರೆ.
ಕನ್ನಡ ಹೋರಾಟಗಾರರ ಯುವ ಸಂಘಟನೆಗಳ ಅಧ್ಯಕ್ಷ ಆರ್ ಹರೀಶ್ ಮಾತನಾಡಿ ಸನ್ನಿ ಲಿಯೋನ್ ಅಂತಹಾ ನಟಿ ಹಿಂದೂಧರ್ಮದ ಐತಿಹಾಸಿಕ ರಾಣಿಯ ಪಾತ್ರ ಮಾಡುವುದು ಬೇಡ ಎಂದಿದ್ದಾರೆ. "ಸನ್ನಿ ಅಶ್ಲೀಲ ಪಾತ್ರಗಳನ್ನು ಮಾಡಿ ಜನಪ್ರಿಯತೆ ಗಳಿಸಿದವರು. ಇಂತಹಾ ವ್ಯಕ್ತಿಯು ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಸರಿಯಲ್ಲ.ಮಹಾದೇವಿ ಕರ್ನಾಟಕದ ಪರಂಪರೆಯಲ್ಲಿ ಗುರುತಿಸಲ್ಪಡುವ ಮಹತ್ವದ ರಾಣಿಯಾಗುದ್ದಾರೆ. ಅವರು ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ.ಆದರೆ ಇಂತಹಾ ರಾಣಿಯೊಬ್ಬರ ಪಾತ್ರವನ್ನು ಸನ್ನಿಯವರು ಅಭಿನಯಿಸುವುದರಿಂದ ಹಿಂದೂಗಳ, ಕನ್ನಡಿಗರ ಭಾವನೆಗೆ ಧಕ್ಕೆಯಾಗಲಿದೆ"
ಪ್ರತಿಭಟನೆಯಲ್ಲಿ ಸನ್ನಿಲಿಯೋನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದ ಹೆಮ್ಮೆಯ ರಾಷ್ಟ್ರಕೂಟರ ಮಹಾರಾಣಿ ವೀರಮಹಾದೇವಿ ಜೀವನಾಧಾರಿತ ಚಿತ್ರ ಇದಾಗಿದ್ದು, ಪಂಚ ಭಾಷೆಗಳಲ್ಲಿ ತಯಾರಾಗುತ್ತಿದೆ.ಇದಕ್ಕಾಗಿ ಒಟ್ಟು 100 ಕೋಟಿ ಬಂಡವಾಳ ಹೂಡಲಾಗಿದೆ.
SCROLL FOR NEXT