ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ (ಸಂಗ್ರಹ ಚಿತ್ರ)
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಚಿತ್ರ ನಂಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಮಾಡಿರುವ ಮೀ ಟೂ ಆರೋಪದ ವಿರುದ್ಧ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಅರ್ಜುನ್ ಸರ್ಜಾ ವಿರುದ್ದ ಆರೋಪ ಕುರಿತಂತೆ ಶ್ರುತಿ ಹರಿಹರನ್ ಅವರಿದೆ ಪತ್ರ ಬರೆಯಲು ಮುಂದಾಗಿರುವ ನಿರ್ಮಾಪಕ ಮುನಿರತ್ನ ಅವರು, ಆರೋಪಗಳ ಕುರಿತಂತೆ 7 ದಿನಗಳೊಳಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷನಾಗಿ ನಾನು ಶ್ರುತಿ ಹರಿಹರನ್'ಗೆ ಪತ್ರ ಬರೆಯುತ್ತಿದ್ದೇನೆ. 7 ದಿನಗಳೊಳಗಾಗಿ ಆಕೆ ಉತ್ತರ ನೀಡಬೇಕು. ದಾಖಲೆಗಳನ್ನು ಒಂದು ವಾರದ ಒಳಗೆ ತಲುಪಿಸಬೇಕು. ಒಂದು ವೇಳೆ ಉತ್ತರ ನೀಡದೇ ಹೋದಲ್ಲಿ, ಆರೋಪ ಸುಳ್ಳು ಎಂದು ಭಾವಿಸಲಾಗುತ್ತದೆ. ಬಳಿಕ ನಮ್ಮ ಸಂಘದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಹೇಳಿಕೆಯನ್ನು ಪರಿಗಣಿಸುವುದಿಲ್ಲ. ನೇರವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆಂದಿದ್ದಾರೆ.