ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಶೃತಿ #MeToo ಆರೋಪದ ಹಿಂದೆ ಧರ್ಮದ ನಂಟು, ಅರ್ಜುನ್ ಆಪ್ತ ನಿಂಬರಗಿ ಹೇಳಿದ್ದು!

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಪ್ರಕರಣಕ್ಕೆ ಇದೀಗ ಧಾರ್ಮಿಕ ನಂಟು ಅಂಟಿಕೊಂಡಿದೆ.

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಪ್ರಕರಣಕ್ಕೆ ಇದೀಗ ಧಾರ್ಮಿಕ ನಂಟು ಅಂಟಿಕೊಂಡಿದೆ.
ಹೌದು.. ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿಬಂದಿರುವ ಗಂಭೀರ ಲೈಂಗಿಕ ಕಿರುಕುಳ ಆರೋಪ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನು ಅಲುಗಾಡಿಸಿದ್ದು, ಇದೀಗ ಈ ಇಡೀ ಪ್ರಕರಣ ಇದೀಗ ತನ್ನ ಟ್ರ್ಯಾಕ್ ಬದಲಿಸಿದಂತೆ ಕಂಡುಬರುತ್ತಿದೆ. ಹೌದು ಇದಕ್ಕೆ ಕಾರಣವಾಗಿರುವುದು ಅರ್ಜುನ್ ಸರ್ಜಾ ಆಪ್ತ ಮತ್ತು ಉದ್ಯಮಿ ಪ್ರಶಾಂತ್ ನಿಂಬರಗಿ..
ನಟಿ ಶೃತಿ ಹರಿಹರನ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮಾತನಾಡಿರುವ ಸಂಬರ್ಗಿ, ಅರ್ಜುನ್ ಸರ್ಜಾ ಅವರು ಹನುಮ ಭಕ್ತ, ಆರೋಪದ ಹಿಂದೆ ಹಿಂದೂ ವಿರೋಧಿ ಅಜೆಂಡಾವಿದೆ. ಸರ್ಜಾ ಅವರು ಹಿಂದೂಧರ್ಮ ಅನುಸರಿಸುತ್ತಾರೆ. ಅವರು ಚೆನ್ನೈನಲ್ಲಿ ಹನುಮನ ಮೂರ್ತಿ ನಿರ್ಮಿಸಿದ್ದಾರೆ. ಅರ್ಜುನ್ ಸರ್ಜಾ ಅವರ ತಂದೆ ಆರ್‍ಎಸ್‍ಎಸ್‍ನಲ್ಲಿದ್ದವರು ಇದೇ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡುತ್ತಿರಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಶೃತಿ ಕುರಿತು ಮಾತನಾಡಿದ ಸಂಬರ್ಗಿ, ಶೃತಿ ಹರಿಹರನ್ ತಂದೆ ಕಮ್ಯೂನಿಸ್ಟ್ ಬೆಂಬಲಿಗರು. ಶೃತಿ ಹರಿಹರನ್ ಅವರ ಮೀಟೂ ಆರೋಪದ ಹಿಂದೆ ಮೋದಿ ವಿರೋಧಿ, ಹಿಂದೂ ವಿರೋಧಿ, ಬಿಜೆಪಿ ವಿರೋಧಿ ಅಜೆಂಡಾವಿದೆ. ಕವಿತಾ ಲಂಕೇಶ್, ನಟ ಚೇತನ್, ರೂಪಾ ಅಯ್ಯರ್ ಇವರೆಲ್ಲ ಕನ್ನಡ ಸಿನಿಮಾ ಲೋಕದ ಎಡಪಂಥಿಯರು. ಪ್ರಕಾಶ್ ರೈ ಅಂತಹವರೂ ಕೂಡ ಹಿಂದೆ ಮುಂದೆ ನೋಡದೆ ಶೃತಿಗೆ ಬೆಂಬಲ ನೀಡುತ್ತಿದ್ದಾರೆ. ಇದು ಖಂಡಿತಾ ಸಂಪೂರ್ಣ ವ್ಯವಸ್ಥಿತವಾದ ಪೊಲಿಟಿಕಲ್ ಡ್ರಾಮಾ ಎಂದು ನಿಂಬರಗಿ ಕಿಡಿಕಾರಿದ್ದಾರೆ.
ಅಂತೆಯೇ ನಟ ಚೇತನ್ ವಿರುದ್ಧ ಕಿಡಿಕಾರಿದ ಸಂಬರ್ಗಿ, ಈ ಹಿಂದೆ ಅರ್ಜುನ್ ಮಾಡಿದ್ದ ಪ್ರೇಮಬರಹ ಚಿತ್ರದಲ್ಲಿ ಆರಂಭದಲ್ಲಿ ಚೇತನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದಕ್ಕಾಗಿ ಅವರಿಗೆ 10 ಲಕ್ಷ ಅಡ್ವಾನ್ಸ್ ಕೂಡ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರ ಸ್ಥಾನಕ್ಕೆ ಚಂದನ್ ಆಯ್ಕೆಯಾದರು. ಚಿತ್ರ ಬಿಡುಗಡೆ ಬಳಿಕ ಚೇತನ್ ಬಳಿ ಅರ್ಜುನ್ ಹಣ ವಾಪಸ್ ಕೇಳಿದ್ದರು. ಇದೇ ಕೋಪದಿಂದ ಚೇತನ್ ಹೀಗೆ ಮಾಡಿದ್ದಾರೆ ಎಂದು ನಿಂಬರಗಿ ಗಂಭೀರ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!