ಸಂಜನಾ-ನಾಗೇಂದ್ರ ಪ್ರಸಾದ್ 
ಸಿನಿಮಾ ಸುದ್ದಿ

ಗೌರಮ್ಮನಂತಿದ್ರೆ ಯಾರೂ ನೋಡಲ್ಲ ಅಂದಿದ್ರಂತೆ ಸಂಜನಾ: ನಾಗೇಂದ್ರ ಪ್ರಸಾದ್ ಬಿಚ್ಚಿಟ್ಟ ರಹಸ್ಯ!

ಗಂಡ-ಹೆಂಡತಿ ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಅವರು ಕಿಡಿಕಾರಿದ್ದಾರೆ...

ಗಂಡ-ಹೆಂಡತಿ ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಅವರು ಕಿಡಿಕಾರಿದ್ದಾರೆ.
ಗಂಡ-ಹೆಂಡತಿ ಚಿತ್ರದ ಬಿಡುಗಡೆ ವೇಳೆ ಸಂಜನಾರ ಹಾಟ್ ಅಭಿನಯದ ಕುರಿತು ಭಾರೀ ಚರ್ಚೆಗಳಾಗಿತ್ತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಜನಾ ಅವರು, ನಾವು ಗೌರಮ್ಮನಂತಿದ್ದರೆ ಯಾರೂ ನಮ್ಮನ್ನು ನೋಡುವುದಿಲ್ಲ. ಪಾತ್ರಕ್ಕೆ ಬೇಕಂತೆ ನಾವು ಅಭಿನಯಿಸಬೇಕು ಎಂದು ಸ್ವತಃ ಅವರೇ ಹೇಳಿದ್ದರು ಎಂದು ನಾಗೇಂದ್ರ ಪ್ರಸಾದ್ ಅವರು ಕನ್ನಡಪ್ರಭ ಪತ್ರಿಕೆಯಲ್ಲಿ ಅಂದು ಪ್ರಕಟವಾಗಿದ್ದ ವರದಿಯನ್ನು ನಮೂದಿಸಿ ಮಾತನಾಡಿದ್ದಾರೆ. 
ಕನ್ನಡಪ್ರಭ ಪತ್ರಿಕೆಯಲ್ಲಿ ಅಂದಿನ ವರದಿ ಹೀಗಿದೆ:
ಚಿತ್ರರಂಗದಲ್ಲಿ ಯಾವ ನಟಿ ಮೈತೋರಿಸಿಲ್ಲ. ಗೌರಮ್ಮನಂತಿದ್ರೆ ಯಾರು ತಿರುಗಿ ನೋಡುವುದಿಲ್ಲ. ಈ ಜಗತ್ತು ಹಾಗೆ ಇದೆ. ಎಲ್ಲರಿಗೂ ಪ್ರೋಫಷನಲಿಸಂ ಬೇಕು. ನಿರ್ದೇಶಕರು ಹೇಳಿದಂತೆ ನಟಿಸಬೇಕು. ಆ ಪಾತ್ರ ಏನು ಕೇಳುತ್ತೋ, ನಿರ್ದೇಶಕರು ಏನು ಹೇಳುತ್ತಾರೆ ಅದೇ ರೀತಿ ನಟಿಸಬೇಕು. ಹಾಗೆ ನಾನು ಮಾಡಿಲ್ಲ ಅಂದರೆ ಮನೆಯಲ್ಲಿ ಕುಳಿತುಕೊಳ್ಳಬೇಕು. ನನಗೆ ಇಷ್ಟ ಆಗೋ ಪಾತ್ರ ಮಾಡ್ತಿನೀ, ನಾನು ಯಾರಿಗೂ ಕೇರ್ ಮಾಡುವುದಿಲ್ಲ. ಇದು ನನ್ನ ವೃತ್ತಿ, ನನಗೆ ಬೇಕಾದನ್ನು ಆರಿಸಿಕೊಳ್ಳಲು ಹಕ್ಕು, ಸ್ವಾತಂತ್ರ್ಯ ನನಗಿದೆ ಎಂದು ಹೇಳಿದ್ದರು. 
ಇಷ್ಟೆಲ್ಲಾವನ್ನು ಸ್ವತಃ ನಟಿ ಸಂಜನಾ ಹೇಳಿದ್ದಾರೆ. ಹೀಗಿದ್ದರು ಸಂಜನಾ ಈಗ ಗಂಡ-ಹೆಂಡತಿ ಚಿತ್ರಕ್ಕಾಗಿ ನಿರ್ದೇಶಕರು 32ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಬೇಕಾಗೆ ತೆಗೆಸಿಕೊಂಡರು ಎಂದು ನಿರ್ದೇಶಕನ ತೇಜೋವಧೆ ಮಾಡುವುದು ಎಷ್ಟು ಸರಿ ಎಂದು ನಾಗೇಂದ್ರ ಪ್ರಸಾದ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಟಿಕೆಟ್‌: ಡಿಕೆ ಶಿವಕುಮಾರ್ ಘೋಷಣೆ

ಅನಂತ್‌ನಾಗ್‌: ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆ!

ಬೆಂಗಳೂರು: CJI ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಎಫ್ಐಆರ್ ದಾಖಲು

ಸ್ವದೇಶಿ ಮಂತ್ರ: Gmailನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್‌ಗೆ ಠಕ್ಕರ್

ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)

SCROLL FOR NEXT