ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ಮತ್ತು ಜಗ್ಗೇಶ್ 
ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು: ಜಗ್ಗೇಶ್

ಅರ್ಜುನ್ ಸರ್ಜಾ ಅವರಂತಹಾ ನಟರ ಬಗ್ಗೆ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು ಎಂದು ಸ್ಯಾಂಡಲ್ ವುಡ್ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

ಬೆಂಗಳುರು: ಅರ್ಜುನ್ ಸರ್ಜಾ ಅವರಂತಹಾ ನಟರ ಬಗ್ಗೆ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು ಎಂದು ಸ್ಯಾಂಡಲ್ ವುಡ್ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಜಗ್ಗೇಶ್ "ಶ್ರುತಿ ಹಾಗೊಂದು ವೇಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಆ ತಕ್ಷಣವೇ ಪ್ರತಿಕ್ರಿಯೆ ನೀಡಬೇಕಿತ್ತು. ಸರ್ಜಾ ವಿಚಾರದಲ್ಲಿ ಶ್ರುತಿ ತಪ್ಪು ಮಾಡಿದ್ದಾರೆ. ಅರ್ಜುನ್ ಸರ್ಜಾ ಸರಳ ವ್ಯಕ್ತಿ, ಸುಸಂಸ್ಕೃತರು. ಡಾ. ರಾಜ್, ವಿಷ್ಣುವರ್ಧನ್ ಅವರಂತೆಯೇ ಜಂಟಲ್ ಮ್ಯಾನ್" ಎಂದಿದ್ದಾರೆ.
"ನಟನೆ ಗಂಧರ್ವ ವಿದ್ಯೆ.ಕಲಾವಿದರು ಎಲ್ಲಾ ಬಗೆಯ ಪಾತ್ರವನ್ನೂ ಮಾಡಬೇಕಾಗುತ್ತದೆ.ಅರ್ಜುನ್ ಸರ್ಜಾ ಸಹ ಅದ್ಭುತ ನಟರಾಗಿದ್ದು ಶ್ರುತಿ ಅವರ ಈ ಆರೋಪ ಅವರ 35 ವರ್ಷದ ಸಿನಿಮಾ ಕೃಷಿಯನ್ನ ಹಾಳು ಮಾಡಿದೆ.
"ನಾನು ಸದಾ ಮಹಿಳೆಯರ ಪರವಾಗಿಯೇ ಇರುವ ಮನುಷ್ಯ. . ನನಗೆ ಜನ್ಮ ನೀಡಿದ್ದು ತಾಯಿ. ಆದರೆ ಚಿತ್ರರಂಗಕ್ಕೆ ಪ್ರವೇಶಿಸಿದ ಮಹಿಳೆಯರು ಸಾರ್ವಜನಿಕವಾಗಿ ನಟಿಸಬೇಕಾಗುತ್ತದೆ. ಪ್ರತಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಏಕಾಗುತ್ತದೆ.
"ತಂತ್ರಜ್ಞಾನ ಬಹಳ ಮುಂದುವರಿದಿದೆ. ಮೊಬೈಲ್ ಇರುಉದು ಸೆಲ್ಫೀ ತೆಗೆದುಕೊಳ್ಳುವುದಕ್ಕೆ ಅಷ್ಟೇ ಅಲ್ಲ.ಇಂತಹಾ ದೌರ್ಜನ್ಯ ಪ್ರಕರಣ ನಡೆದಾಗಲೂ ಅದನ್ನು ಬಳಸಿ ಲೈವ್ ವೀಡಿಯೋ ಮಾಡಬಹುದು, ಮಾತನಾಡಿ ದೂರು ಸಲ್ಲಿಸಬಹುದು.
"ಇಂದು ಅರ್ಜುನ್ ಸರ್ಜಾ ವಿರುದ್ಧ ಮಾಡಿದ "ಮೀಟೂ" ಅಆರೋಪದಿಂದ ಅವರನ್ನು ಕೊಲೆ ಮಾಡಿದಂತಾಗಿದೆ. ಇಂದು ಈ ಆಂದೋಲನ ರಾಜಕೀಯ ತಿರುವು ತೆಗೆದುಕೊಳ್ಳುತ್ತಿದೆ.
ಪ್ರಕಾಶ್ ರೈ ಸ್ವರ್ಗದಿಂದ ಬಂದಿದ್ದಾರೆ!
ನಟಿ ಶ್ರುತಿ ಪರವಾಗಿ ಮಾತನಾಡಿದ್ದ, ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಕಾಶ್ ರೈ ವಿರುದ್ಧ ಖಾರವಾಗಿ ಪ್ರತಿಕ್ರಯಿಸಿದ ಜಗ್ಗೇಶ್ "ಅರ್ಜುನ್ ಸರ್ಜಾ ಸ್ಲಂ ನಿಂದ ಬಂದಿದ್ದಾರೆ, ಪ್ರಕಾಶ್ ರೈ ಮಾತ್ರ ಸ್ವರ್ಗದಿಂದ ಬಂದಿದ್ದಾರೆ!  ರೈ ಸಹ ಓರ್ವ ಜಂಟಲ್ ಮ್ಯಾನ್!  ಸರ್ಜಾ 35 ವರ್ಷದಿಂದ ಚಿತ್ರರಂಗದಲ್ಲಿದ್ದು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದ್ದಾರೆ. ಇಂತಹವರ ಮೇಲೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ." ಎಂದರು.
"ಇದು ಇಲ್ಲಿಗೇ ಮುಗಿಯಬೇಕು. ಇಂತಹಾ ಚರ್ಚೆ, ವಿವಾದಗಳಿಂದ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತದೆ. ಇದರಿಂದ ಮುಂದೆ ಸಿನಿಮಾದವರು ಎಂದರೆ ಮನೆಯನ್ನು ಸಹ ಯಾರೂ ಬಾಡಿಗೆಗೆ ನೀಡಲ್ಲ! ಹೀಗಾಗಿ ಎಲ್ಲವನ್ನೂ ಇಲ್ಲಿಗೇ ಮುಗಿಸಿ" ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!