ರವಿ ಶ್ರೀವತ್ಸ, ಸಂಜನಾ ಗಲ್ರಾನಿ
ಗಂಡ ಹೆಂಡತಿ ಚಿತ್ರದ ವಿವಾದ ತಾರಕಕ್ಕೇರಿದ್ದು ನಿರ್ದೇಶಕ ರವಿ ಶ್ರೀವತ್ಸ ಹಾಗೂ ನಟಿ ಸಂಜನಾ ಗಲ್ರಾನಿ ವಿರುದ್ಧ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ರವಿ ಶ್ರೀವತ್ಸ ಅವರು ನಟಿ ಸಂಜನಾ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು. ಇನ್ನು ರವಿ ಶ್ರೀವತ್ಸ ಅವರ ಸ್ಪಷ್ಟನೆಗಳಿಗೆ ಪ್ರತಿಕ್ರಿಯಿಸಿದ ಸಂಜನಾ, ರವಿ ಶ್ರೀವತ್ಸ ಫ್ಲಾಪ್ ನಿರ್ದೇಶಕ. ಮನೆಯಲ್ಲಿ ಕುಳಿತು ಉಪ್ಪಿನಕಾಯಿ ಹಾಕುವವರು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.
ನಾನು ಸದ್ಯ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾನೊಬ್ಬ ಹಿರಿಯ ನಟಿ, ಆರೇಳು ಚಿತ್ರಗಳನ್ನು ಮಾಡಿ ಸೋತಿರುವ ರವಿ ಶ್ರೀವತ್ಸ ಓರ್ವ ಫ್ಲಾಪ್ ನಿರ್ದೇಶಕ ಎಂದು ಹೇಳಿದ್ದಾರೆ. ಇನ್ನು ನಾನು ಬಾಹುಬಲಿ ಚಿತ್ರ ನಿರ್ಮಾಪಕರ ಜತೆ ಕೆಲಸ ಮಾಡುತ್ತಿದ್ದೇನೆ. ನಾನು ಅಮೆರಿಕದಲ್ಲಿದ್ದೇನೆ ನಾನೊರ್ವ ಸಾಮಾನ್ಯ ನಟಿ ಅಲ್ಲ ಎಂದು ಹೇಳಿದ್ದಾರೆ.
ಗಂಡ-ಹೆಂಡತಿ ಚಿತ್ರ ಹಿಂದಿಯ ಮರ್ಡರ್ ಚಿತ್ರ ರಿಮೇಕ್ ಅಂತ ನನಗೆ ಗೊತ್ತಿತ್ತು. ಆದರೆ ನಿರ್ದೇಶಕರು ಈ ಚಿತ್ರವನ್ನು ಸೌತ್ ಇಂಡಿಯಾ ಸ್ಟೈಲ್ ನಲ್ಲಿ ತೆಗೆಯೋಣ ಅಂತ ಹೇಳಿದ್ದರು. ಅದಕ್ಕೆ ನಾನು ಒಪ್ಪಿಕೊಂಡಿದ್ದೆ. ಆದರೆ ಚಿತ್ರೀಕರಣದ ವೇಳೆ ಬಲವಂತವಾಗಿ ನನ್ನ ಕೈಯಲ್ಲಿ ಕಿಸ್ಸಿಂಗ್ ದೃಶ್ಯಗಳನ್ನು ಮಾಡಿಸಿದ್ದರು ಎಂದು ಹೇಳಿದ್ದಾರೆ.
ನಾನು ಹಲವು ನಿರ್ದೇಶಕರ ಜತೆ ನಟಿಸಿದ್ದೇನೆ. ಆದರೆ ಅವರ ಮೇಲೆಲ್ಲಾ ನಾನು ಆರೋಪಗಳನ್ನು ಮಾಡಿಲ್ಲ. ರವಿ ಶ್ರೀವತ್ಸ ಓರ್ವ ಸ್ಯಾಡಿಸ್ಟ್ ಅದಕ್ಕಾಗಿಯೇ ನಾನು ಅವರ ಮೇಲೆ ಕಿರುಕುಳದ ಆರೋಪ ಮಾಡಿದ್ದೇನೆ ಎಂದರು.