ನಟ ಭಯಂಕರ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್, ಬೆಂಗಳೂರಿಗೆ ಶೀಘ್ರವೇ ಒಳ್ಳೆ ಹುಡುಗ ಪ್ರಥಮ್ ಗುಡ್ ಬೈ?

ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ -4ರಲ್ಲಿ ಸ್ಪರ್ಧಿಸಿ ಗೆದ್ದು ಜನಪ್ರಿಯರಾಗಿರುವ ಒಳ್ಳೆ ಹುಡುಗ ..

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ -4ರಲ್ಲಿ ಸ್ಪರ್ಧಿಸಿ ಗೆದ್ದು ಜನಪ್ರಿಯರಾಗಿರುವ ಒಳ್ಳೆ ಹುಡುಗ ಎಂದು ತಮ್ಮನ್ನು ತಾವೇ ಸಂಬೋಧಿಸಿಕೊಳ್ಳುವ  ಪ್ರಥಮ್ ಶೀಘ್ರವೇ ಸ್ಯಾಂಡಲ್ ವುಡ್ ಗೆ ವಿದಾಯ ಹೇಳುವ ಸಾಧ್ಯತೆಯಿದೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಜೀವನದಲ್ಲಿ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಸಿನಿಮಾದಲ್ಲೂ ನಟಿಸಿದ್ದೇನೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದೇನೆ. ಆದರೆ ಬೆಂಗಳೂರಿನ ಯಾಂತ್ರಿಕ ಒತ್ತಡದ ಬದುಕು ಸಾಕಾಗಿದೆ, ಇಲ್ಲಿನ ಜೀವನಶೈಲಿಗೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನೂರಿಗೆ ಹೋಗಿ ವ್ಯವಸಾಯ, ಕೃಷಿ ಮಾಡೋಣ ಎಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.



ನನ್ನ ಮದುವೆ ವಿಚಾರ ಕೂಡ ಮನೆಯಲ್ಲಿ ಚರ್ಚೆ ನಡೆಯುತ್ತಿದೆ. ಮದುವೆ ಆಗುವ ಮುನ್ನ ಊರಿಗೆ ಹೋಗಿ ನೆಲೆಸೋಣ ಎನ್ನುವುದು ನನ್ನ ಮತ್ತು ಮನೆಯವರ ಆಸೆಯಾಗಿದೆ. ಈಗಾಗಲೇ 200 ತೆಂಗಿನ ಸಸಿಗಳನ್ನು ನೆಟ್ಟಿದ್ದು ಕೃಷಿಯಲ್ಲಿ ಮುಂದುವರಿಯೋಣ ಎಂದಿದ್ದೇನೆ ಎಂದಿದ್ದಾರೆ.

ಅವರು ನಟಿಸುತ್ತಿರುವ ನಟ ಭಯಂಕರ ಸಿನಿಮಾವೇ ಕೊನೆ ಸಿನಿಮಾವಾಗುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ ಅವರ ಹಿತೈಷಿಗಳಾದ ಶ್ರೀಕಾಂತ್ ಪ್ರೇಮ್ ಕುಮಾರ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಸೂರಪ್ಪ ಬಾಬು ಬೆಂಗಳೂರಿನಲ್ಲಿಯೇ ಇದ್ದು ಕೆಲಸ ಮಾಡು ಎಂದು ಸಲಹೆ ನೀಡುತ್ತಿದ್ದಾರಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

SCROLL FOR NEXT