ದುನಿಯಾ ವಿಜಯ್ ಮತ್ತು ನಾಗರತ್ನ
ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ದೂರಾಗಲು ನಿರ್ಧರಿಸಿದ್ದು ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ನಟ ವಿಜಯ್ ಬೆಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೆ ಹಿಂದೆ ಸಹ ನಾಗರತ್ನ ಅವರಿಗೆ ವಿಚ್ಚೇದನ ನೀಡಲು ಮುಂದಾಗಿದ್ದ ನಟ ಸಂಧಾನದ ನಂತರ ವಿಚ್ಚೇದನ ಅರ್ಜಿ ಹಿಂಪಡೆದು ಅವರಿಗೆ ಸಲ್ಲಬೇಕಾದ ಆಸ್ತಿ ನೀಡಿದ್ದರು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಮಾತ್ರ ನಾಗರತ್ನ ಅವರ ವಿರುದ್ಧ ಭಾರೀ ಅಸಮಾಧಾನಗೊಂಡಿರುವ ನಟ ಮತ್ತೆ ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಬಾರಿ ನ್ಯಾಯಾಲಯಕ್ಕೆ ಅಧಿಕೃತವಾಗಿ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿರುವ ನಟ ದುನಿಯಾ ವಿಜಯ್ ನಾಗರತ್ನ ಅವರ ಕ್ರೌರ್ಯವೇ ಈ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಾಗರತ್ನ ಹಾಗೂ ವಿಜಯ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇತ್ತೀಚೆಗೆ ನಡೆ ಹಲ್ಲೆ ಪ್ರಕರಣದಲ್ಲಿ ವಿಜಯ್ ಜೈಲು ಸೇರಿದ್ದಾಗ ನಾಗರತ್ನ ಅವರು ತನ್ನೊಡನೆ ಇದ್ದಾರೆ ಎಂದಿದ್ದಲ್ಲದೆ "ನಾನು ಅವರ ನಿಜವಾದ ಪತ್ನಿ " ಎಂದು ಕೀರ್ತಿ ಗೌಡ ವಿರುದ್ಧ ಹರಿಹಾಯ್ದಿದ್ದರು. ಆದರೆ ಕೀರ್ತಿ ಮೇಲಿನ ನಾಗರತ್ನ ಅವರ ಹಲ್ಲೆ ಕುರಿತ ವೀಡಿಯೋ ದೃಶ್ಯ ಮಾದ್ಯಮದಲ್ಲಿ ಹರಿದಾಡುತ್ತಿದ್ದಂತೆ ಆಕೆ ನಾಪತ್ತೆಯಾಗಿದ್ದಾರೆ. ನಿನ್ನೆ (ಭಾನುವಾರ) ವಿಜಯ್ ನಾಗರತ ವಿರುದ್ಧ ಪೋಲೀಸ್ ದೂರನ್ನು ಸಲ್ಲಿಸಿದ್ದರು.