ಗುರುಪ್ರಸಾದ್-ಹುಚ್ಚ ವೆಂಕಟ್ 
ಸಿನಿಮಾ ಸುದ್ದಿ

'ಕಾಮುಕ ಗುರುಪ್ರಸಾದ್ ನನ್ನು ಕತ್ತರಿಸ್ತೀನಿ': ಗುರುಪ್ರಸಾದ್ ವಿರುದ್ಧ ಹುಚ್ಚ ವೆಂಕಟ್ ಗರಂ, ವಿಡಿಯೋ ವೈರಲ್!

ತಾವು ಪತಿವ್ರತೆ ಎಂಬುದನ್ನು ಸಾಬೀತು ಪಡಿಸಲು ನಟಿಯರು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಹುಚ್ಚ ವೆಂಕಟ್ ಗರಂ ಆಗಿದ್ದಾರೆ...

ಬೆಂಗಳೂರು: ತಾವು ಪತಿವ್ರತೆ ಎಂಬುದನ್ನು ಸಾಬೀತು ಪಡಿಸಲು ನಟಿಯರು ಮೀಟೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಹುಚ್ಚ ವೆಂಕಟ್ ಗರಂ ಆಗಿದ್ದಾರೆ. 
ಗುರುಪ್ರಸಾದ್ ಅವರು ನಿನ್ನೆ ಶೃತಿ ಹರಿಹರನ್, ಸಂಗೀತಾ ಭಟ್ ಹಾಗೂ ಸಂಜನಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಗುರುಪ್ರಸಾದ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವೆಂಕಟ್ ಹೆಣ್ಣು ಮಕ್ಕಳಲ್ಲಿ ಕ್ಷಮೆ ಕೇಳದೆ ಇದ್ರೆ ಹಾಫ್ ಮರ್ಡರ್ ಮಾಡ್ತೀನಿ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. 
ನಿರ್ದೇಶಕ ಗುರುಪ್ರಸಾದ್ ಗೆ, ಏನಂದಿ ನೀನು..? ಹೆಣ್ಮಕ್ಕಳು ಪತಿವ್ರತೆ ಅಂತ ಪ್ರೂವ್ ಮಾಡೋಕ್ಕೋಸ್ಕರ ಈ ಥರಾ ಮಾಡ್ತಾ ಇದ್ದಾರೆ ಅಂತ ಅಲ್ವಾ...? ನಿಮ್ಮಂಥಾ ಕಚಡ ನನ್ ಮಕ್ಕಳು. ಕಚಡ ಡೈರೆಕ್ಟರ್ ಗಳಿಂದಲೇ ಕಣೋ, ಇವತ್ತು ಹೆಣ್ಮಕ್ಕಳು ಸಿನಿಮಾ ರಂಗಕ್ಕೆ ಬರೋಕೆ ಭಯ ಪಡ್ತಿರೋದು. ಎಂಥೆಂಥಾ ಟ್ಯಾಲೆಂಟ್ ಗಳಿದ್ದಾರೆ. ಬಂದ್ ತಕ್ಷಣ ಬಂದ್ ಐಟಮ್ ಸಾಂಗ್ ಇಟ್ ಬಿಡ್ತೀರಾ ಅಲ್ವಾ? ಫಸ್ಟ್ ಹೇಳೋದೇ ಅದು, ಐಟಂ ಸಾಂಗ್ ಇರುತ್ತೆ. ಅಡ್ಜೆಸ್ಟ್ ಮಾಡ್ಕೋ ಬೇಕು ಅಂತ. 
ನಮ್ ಮನೇಲಿ ಹೆಣ್ಮಕ್ಕಳು ಇರ್ತಾರೆ ಗುರುಪ್ರಸಾದ್. ನಿಮ್ ಮನೇಲಿ ಹೆಣ್ಮಕ್ಕಳು ಇದ್ದಾರಾ? ನಿಮ್ ತಾಯಿ ಇದ್ದಾರಾ..? ಇದಾರೆ ತಾನೆ..? ಪ್ರತಿಯೊಬ್ಬರ ಮನೇಲಿ ಹೆಣ್ಮಕ್ಕಳು ಇರ್ತಾರೆ. ಹೆಣ್ಮಕ್ಕಳ ಬಗ್ಗೆ ಮಾತಾಡುವಾಗ ಕೇರ್ ಫುಲ್ ಆಗಿರಬೇಕು. ಹೆಣ್ಮಕ್ಕಳು ಅಂದ್ರೆ ನೀನು ಏನ್ ಅನ್ಕೋಂಡಿದ್ಯಾ..? ಬೇಕಾ ಬಿಟ್ಟಿ ಬಿದ್ದಿದ್ದಾರಾ..? ನೀನು ಹೇಗೋ ಮಾತಾಡ್ತೀಯಾ ಅಂತ ವೆಂಕಟ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT