ಸಿನಿಮಾ ಸುದ್ದಿ

ಸೆ.2ಕ್ಕೆ 'ಟೆರರಿಸ್ಟ್' ಚಿತ್ರದ ಟ್ರೇಲರ್ ಬಿಡುಗಡೆ

Manjula VN
ಪೋಸ್ಟರ್ ಗಳಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ನಟಿ ರಾಗಿಣಿ ನಟನೆಯ ಮಹಿಳಾ ಪ್ರಧಾನ ಚಿತ್ರ 'ದಿ ಟೆರರಿಸ್ಟ್' ಚಿತ್ರದ ಟ್ರೇಲರ್ ಸೆ.2ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಲಿದೆ. 
ಚಿತ್ರವನ್ನು ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದು, ಮೊದಲ ಬಾರಿಗೆ ರಾಗಿಣಿ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದಾರೆ. ಪ್ರೇಕ್ಷರಲ್ಲಿ ಕುತೂಹಲ ಕೆರಳಿಸಿರುವ ಚಿತ್ರದ ಟ್ರೇಲರ್ ನ್ನು ನಟ ರಕ್ಷಿತ್ ಶೆಟ್ಟಿಯವರು ಬಿಡುಗಡೆ ಮಾಡಲಿದ್ದಾರೆ. 
ಮಂತ್ರಿ ಮಾಲ್ ನಲ್ಲಿ ಭಾನುವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿರುವ ಸಾರ್ವಜನಿಕರಿಗೆ ಐಮ್ಯಾಕ್ಸ್ ಫಾರ್ಮ್ಯಾಟ್ ನಲ್ಲಿ ಟ್ರೇಲರ್ ನೋಡುವ ಅವಕಾಶ ದೊರಯಲಿದೆ. ಇದು ಕನ್ನಡ ಚಿತ್ರರಂಗದಲ್ಲಿ ಮೊದಲನೇ ಪ್ರಯತ್ನವಾಗಿದೆ ಎಂದು ಚಿತ್ರದ ನಿರ್ದೇಶಕರು ಹೇಳಿದ್ದಾರೆ. 
ಚಿತ್ರದಲ್ಲಿ ರಾಗಿಣಿಯವರು ಮುಸ್ಲಿಂ ಯುವತಿಯಾಗಿ ಕಾಣಿಸಿಕೊಂಡಿದ್ದು, ರೇಷ್ಮಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಬಾಂಬ್ ಸ್ಫೋಟವಾದಾಗ ನಡೆಯುವ ಘಟನೆಗಳ ಸುತ್ತ ಸಾಗುತ್ತದೆ. ಚಿತ್ರಕ್ಕೆ ಎಸ್.ಪ್ರದೀಪ್ ವರ್ಮಾ ಅವರು ಸಂಗೀತವನ್ನು ನೀಡಿದ್ದು, ಮುರಳಿ ಕ್ರಿಶ್ ಅವರು ಕ್ಯಾಮೆರಾ ಮೂಲಕ ತಮ್ಮ ಕೈಚಳಕವನ್ನು ತೋರಿಸಿದ್ದಾರೆ. 
SCROLL FOR NEXT