ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ 
ಸಿನಿಮಾ ಸುದ್ದಿ

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ಮರೆಗುಳಿತನ!

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರಕಾಶ್ ರಾಜ್ ಈ ವಿಷಯ ತಿಳಿಸಿದರು.

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಡಿಮೆನ್ಷಿಯಾ ( ಬುದ್ದಿಮಾಂದ್ಯತೆ ) ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ  ವಿಚಾರ ಸಂಕಿರಣ  ಸಮಾರಂಭದಲ್ಲಿ ಪ್ರಕಾಶ್ ರಾಜ್  ಈ ವಿಷಯ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ,ಸಿನಿಮಾ ಮತ್ತು ಮತ್ತಿತರ ವೇದಿಕೆಗಳಲ್ಲಿ  ಅಭಿಯನದ ಮೂಲಕ  ಡಿಮೆನ್ಷಿಯಾ ರೋಗಕ್ಕೆ ತುತ್ತಾದವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡುತ್ತಿರುವುದಾಗಿ  ತಿಳಿಸಿದರು. ಬುದ್ಧಿಮಾಂದ್ಯತೆ ಕಾಯಿಲೆ ಇರುವ ರೋಗಿಗಳಿಗೆ  ಪಾತ್ರ ನೀಡುವಂತೆ 500 ನಿಯೋಗಗಳ ಮನವೊಲಿಸಿರುವುದಾಗಿ ತಿಳಿಸಿದರು.

ಕೆಲ ತಿಂಗಳ ಹಿಂದೆ  ಆಲ್ಝೈಮರ್  ರೋಗಿಯಪಾತ್ರದಲ್ಲಿ ನಿರ್ವಹಿಸಿದ್ದೇನೆ ಎಂದು ತಿಳಿಸಿದ ಪ್ರಕಾಶ್ ರಾಜ್ ತಮ್ಮ ತಾಯಿಗೂ ಮರೆಗುಳಿತನ ಇರುವ ಬಗ್ಗೆ ವಿವರಿಸಿದರು. ತಮ್ಮ ತಾಯಿ ಆಲ್ಝೈಮರ್   ರೋಗಿ ಅಲ್ಲ ಆದರೆ,  ಮೆದುಳಿನಲ್ಲಿ ತೊಂದರೆಯಿಂದಾಗಿ ಚಿಕಿತ್ಸೆಯಾದ ಮೂರು ದಿನಗಳ ಬಳಿಕ  ತನ್ನ ತಾಯಿ ಸ್ವಂತ ಮಗಳನ್ನೇ  ನೀನು ಯಾರು ಎಂದು ಕೇಳಿದ್ದು ನನ್ನನ್ನೂ ಈಗಲೂ ಕಾಡುತ್ತದೆ ಎಂದರು.

ತಮ್ಮ ಗುರು ಬಾಲಚಂದರ್ ಅವರಿಗೆ ಮರೆವು ಕಾಯಿಲೆ ಇದೇ ಎಂದೂ ಗೊತ್ತಿದ್ದೂ ಅವರಿಗಾಗದವರು ಅವರನ್ನು ವೇದಿಕೆ ಕಾರ್ಯಕ್ರಮಗಳಿಗೆ ಬೇಕಂತಲೆ  ಆಹ್ವಾನಿಸಿ ಹೀಯಾಳಿಸಿದ್ದನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ನಮ್ಮ ಊರಿನ ಶ್ರಿಮಂತ ವ್ಯಕ್ತಿಯೊಬ್ಬರು ಈ ಕಾಯಿಲೆಗೆ ತುತ್ತಾಗಿ ಎಲ್ಲವೂ ಇದ್ದು ಏನು ಇಲ್ಲದ ರೀತಿಯಲ್ಲಿ ಬದುಕಿದ್ದನ್ನೂ ಕಂಡಿದ್ದೇನೆ. ಅವರ ಈ ದೌರ್ಬಲ್ಯವನ್ನು  ದುರ್ಬಳಕೆ ಮಾಡಿಕೊಂಡು ಅನೇಕರು ಅವರ ಆಸ್ತಿ ಲಪಾಟಿಸಿದರು. ಕೊನೆಗೂ ತನ್ನ ಆಸ್ತಿ ಲಪಟಾಯಿಸಿದವರ ಬಳಿಯೇ ಅವರು ಕೆಲಸ ಮಾಡಿದ್ದನ್ನು ನಾನು ನೋಡಿದ್ದೇನೆ ಎಂದರು.

ಇಂತಹ ರೋಗದಿಂದ ಕಂಡು ಸಮಾಜ ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡಿದ್ದೇನೆ.  ಕೆಲವು ಸಲ ಸಾರ್ವಜನಿಕ ಸಮಾರಂಭಗಳಿಗೆ ತೆರಳಲು ಮಾತನಾಡಲು ಭಯವಾಗುತ್ತದೆ ತಪ್ಪುಗಳನ್ನು ಹುಡುಕಲು ಜನರು ಕಾಯುತ್ತಿರುತ್ತಾರೆ

 ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ರೋಗಿಗಳನ್ನು ಅವಮಾನಿಸಿ ನಗುವ ಬದಲು ಅವರಿಗೆ ಗೌರವ ನೀಡಬೇಕಾಗಿದೆ. ಮಾನವೀಯ ಮೌಲ್ಯ ಹಾಗೂ ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ