ಪವನ್ ಕುಮಾರ್ ನಿರ್ದೇಶನದ ಯೂ ಟರ್ನ್ ಚಿತ್ರ 2012ರಲ್ಲಿ ತೆರೆಕಂಡು ಭರ್ಜರಿ ಹಿಟ್ ಆಗಿತ್ತು. ಆ ವೇಳೆ ಶತದಿನೋತ್ಸವ ಆಚರಿಸಿದ್ದ ಚಿತ್ರ ಒಟ್ಟಾರೆ 7.5 ಕೋಟಿ ರುಪಾಯಿ ಗಳಿಕೆ ಮಾಡಿತ್ತು. ಇದೇ ಚಿತ್ರ ಇದೀಗ ತೆಲುಗು ಮತ್ತು ತಮಿಳಿನಲ್ಲಿ ತೆರೆ ಕಂಡ ನಾಲ್ಕನೇ ದಿನಕ್ಕೆ 14 ಕೋಟಿ ಕಲೆಕ್ಷನ್ ಮಾಡಿ ಭರ್ಜರಿ ಕಲೆಕ್ಷನ್ ಮಾಡಿದೆ.
ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನಾಯಕಿಯಾಗಿ ಸಮಂತಾ ಅಕ್ಕಿನೇನಿ, ಆಧಿ ಪಿನಿಶೆಟ್ಟಿ ಮತ್ತು ಭೂಮಿಕಾ ಚಾವ್ಲ ಅಭಿನಯಿಸಿದ್ದಾರೆ. ಇನ್ನು ಬಹುಭಾಷೆಯಲ್ಲಿ ಬಿಡುಗಡೆಯಾಗಿರುವ ಯೂ ಟರ್ನ್ ಚಿತ್ರ ಭರ್ಜರಿ ಯಶಸ್ಸು ಕಂಡಿರುವುದರಿಂದ ಪವನ್ ಕುಮಾರ್ ಇನ್ಮುಂದೆ ಬಹುಭಾಷೆಗಳಲ್ಲಿ ಚಿತ್ರ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ.
ಬಹುಭಾಷೆ ಚಿತ್ರಗಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಕೆಲ ರಿಮೇಕ್ ಚಿತ್ರಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತದೆ. ಹೀಗಾಗಿ ನನ್ನ ತಲೆಯಲ್ಲಿ ಹಲವು ಯೋಜನೆಗಳು ಮೂಡತೊಡಗಿವೆ ಎಂದು ಪವನ್ ಕುಮಾರ್ ಹೇಳಿದ್ದಾರೆ.
ಯೂ ಟರ್ನ್ ಯಶಸ್ಸಿನ ನಂತರ ಇದೀಗ ತೆಲುಗು ಮತ್ತು ತಮಿಳಿಗೆ ಒಂದು ಮೊಟ್ಟೆಯ ಕಥೆ ಚಿತ್ರವನ್ನು ರಿಮೇಕ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದರು.
ಕನ್ನಡದ ಸೂಪರ್ ಹಿಟ್ ಯೂ ಟರ್ನ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದ್ದರು.