ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಸದಾಶಿವ ಬ್ರಹ್ಮಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಸಾಯುವುದಕ್ಕೆ ಮುನ್ನ ನಟ ’ತನ್ನ ಸಾವಿನ ಸುದ್ದಿ ತನ್ನ ಕುಟುಂಬಕ್ಕೆ ಹೊರತು ಇನ್ನಾರಿಗೂ ತಿಳಿಯಕೂಡದು’ ಎಂದಿದ್ದರೆನ್ನಲಾಗಿದೆ. ಹೀಗಾಗಿ ಅವರು ಸಾವನ್ನಪ್ಪಿದ ತಕ್ಷಣವೇ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ರಂಗಭೂಮಿ ಸೆಳೆತದಿಂದ ಉಡುಪಿ ಮನೆ ಬಿಟ್ಟು ಬಂದಿದ್ದ ಸದಾಶಿವ ಬ್ರಹ್ಮಾವರ ಕನ್ನಡದ ಖ್ಯಾತ ಪೋಷಕ ಕಲಾವಿದರಾಗಿದ್ದಾರೆ.ಇವರು ಕನ್ನಡದ ಖ್ಯಾತ ನಟರಾದ ಡಾ. ರಾಜ್, ವಿಷ್ಣುವರ್ಧನ್, ಉಪೇಂದ್ರ ಸುದೀಪ್ ಸೇರಿ ಹಲವರ ಚಿಇತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೂರಾರು ಸಿನಿಮಾ, ಕಿರುತೆರೆ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು.
ಹಿರಿಯ ನಟ ಸದಾಶಿವ ಅವರ ಸಾವಿಗೆ ನವರಸ ನಾಯಕ ಜಗ್ಗೇಶ್ ಕಂಬನಿ ಮಿಡಿದ್ದಾರೆ.
"ನಾನುಕಂಡ ಅತಿ ಸೌಮ್ಯಸ್ವಭಾವದ ವ್ಯೆಕ್ತಿ 1988ರಿಂದ ಇವರ ಜೊತೆ ನಟಿಸಿರುವೆ.ಲಿಫ್ಟ್ ಕೊಡಲಾ ನನ್ನಜೊತೆ ಇವರ ಕಡೆಚಿತ್ರ!ಅವರ ಒಳ್ಳೆಗುಣಕ್ಕೆ ವಯಸ್ಸುಮಾಗಿದಾಗ ಭುಜಕೊಡದ ಮಹನೀಯರಿದ್ದರು ದೌರ್ಭಾಗ್ಯ!ಪರದೆ ಮೇಲಿರುವವರೆಗು ಮಾತ್ರ ಕಲಾವಿದರ ಬದುಕು!ಮಿಕ್ಕಂತೆ ನೆನಪುಮಾತ್ರ"ಬಣ್ಣಮಾಸುವ ಮುನ್ನ ಬದುಕು ಬಲವಾಗಿಟ್ಟುಕೊಳ್ಳಿ ಕಲಾಬಂಧುಗಳೆ.ನಶ್ವರ ಜಗ RIP" ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಇನ್ನು ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಹಿರಿಯ ನಟ ಸದಾಶಿವ ಬ್ರಹ್ಮಾವರ ಸಾವಿಗೆ ಸಂತಾಪ ವ್ಯ್ಕತ್ಪಡಿಸಿದ್ದು "ಕನ್ನಡ ಚಿತ್ರರಂಗಕ್ಕಾಗಿ ದುಡಿದ ಹಿರಿಯ ನಟರಾದ ಸದಾಶಿವ ಬ್ರಹ್ಮಾವರ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos