ಭಾರತೀಯ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್
ಭಾರತೀಯ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಅವರು ತಮ್ಮ ಅದ್ಭುತ ಕಂಠದ ಮೂಲಕ ಲಕ್ಷಾಂತರ ಕನ್ನಡಿಗರ ಮನಗೆದ್ದಿದ್ದಾರೆ. ಬೆಂಗಳೂರು ನಗರದೊಂದಿಗೆ ದೈವಿಕ ಸಂಪರ್ಕವನ್ನು ಹೊಂದಿರುವ ಅವರು, ಪ್ರತೀ ಬಾರಿ ಗಣೇಶ ಉತ್ಸವದ ವೇಳೆ ನಗರಕ್ಕೆ ಆಗಮಿಸುತ್ತಾರೆ.
ಇದರಂತೆ ಭಾನುವಾರ ಕೂಡ ನಗರಕ್ಕೆ ಆಗಮಿಸಿದ್ದ ಶ್ರೇಯಾ ಅವರು, ಹಿಂದಿ ಹಾಗೂ ಕನ್ನಡ ಗೀತೆಗಳನ್ನು ಹಾಡಿ ಅಭಿಮಾನಿಗಳ ಸಂತೋಷವನ್ನು ಹೆಚ್ಚಿಸಿದ್ದಾರೆ.
ಗಣೇಶ ಉತ್ಸವ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಅವರು, ಕನ್ನಡ ಅವರ ನಡುವೆ ಇರುವ ಬಾಂಧವ್ಯದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಈ ಗಣೇಶ ಉತ್ಸವದಿಂದ ಮನೆಗೆ ಹಿಂದಿರುವ ವೇಳೆ ಸಾಕಷ್ಟು ನೆನಪುಗಳನ್ನು ಕೊಂಡೊಯ್ಯುತ್ತೇನೆ. ಬೆಂಗಳೂರಿಗೆ ಬಂದಿರುವುದು ಬಹಳ ಸಂತೋಷವನ್ನುಂಟು ಮಾಡಿದೆ. ನನ್ನ ಹಾಡು ಕೇಳಲು ಅಭಿಮಾನಿಗಳು ಗಂಟೆಗಟ್ಟಲೆ ಕಾದು ನಿಂತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಕನ್ನಡ ಚಿತ್ರರಂಗಕ್ಕೆ ಶ್ರೇಯಾ ಅವರು ನೀಡಿರುವ ಕೊಡುಗೆ ಅಪಾರವಾದದ್ದು. ಕನ್ನಡ ಚಿತ್ರರಂಗದಲ್ಲಿ ಶ್ರೇಯಾ ಅವರು ಹಾಡಿರುವ ಗೀತೆಗಳಾವುದೂ ಫ್ಲಾಪ್ ಆಗಿಲ್ಲ. ಜನರಿಂದ ಉತ್ತಮವಾದ ಪ್ರತಿಕ್ರಿಯೆಗಳು ಬರುತ್ತಿವೆ. ಜನರು ಹಾಡುಗಳನ್ನು ಬಹಳ ಪ್ರೀತಿಸುತ್ತಾರೆ. ಗೀತೆ ಹಾಡುವ ವೇಳೆ ಆಹ್ಲಾದಿಸುತ್ತಾರೆ. ಗೀತೆ ರಚನೆಕಾರರು ನನಗೆ ಉತ್ತಮ ಅವಕಾಶಗಳನ್ನು ನೀಡಿದ್ದಕ್ಕೆ ನಾನು ಅದೃಷ್ಟವಂತೆ ಎಂದೆನಿಸುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗಲ್ಲಿ ಸಾಕಷ್ಟು ಹೆಸರು ಮಾಡಿದ್ದ ಮುಂಗಾರು ಮಳೆ ಚಿತ್ರದಲ್ಲಿ ಅರಳುತಿರುವ ಜೀವದ ಗೆಳೆಯ ಗೀತೆಯನ್ನು ಶ್ರೇಯಾ ಘೋಷಾಲ್ ಅವರು ಹಾಡಿದ್ದು, ಈ ಹಾಡು ಸಾಕಷ್ಟು ಜನರ ಮನಗೆದ್ದಿತ್ತು. ಈ ಬಗ್ಗೆ ಮಾತನಾಡಿರುವ ಅವರು, ಫೇವರೆಟ್ಸ್ ಎಂಬುದು ಯಾವುದೂ ಇಲ್ಲ. ಆದರೆ, ಅರಳುತಿರು ಜೀವದ ಗೆಳೆಯ ಗೀತೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದಿದ್ದಾರೆ.
ಇದೇ ವೇಳೆ ನೂತನ ಗಾಯಕರಿಗೆ ಸಲಹೆ ನೀಡಿರುವ ಅವರು, ಯಾವುದೇ ಹಾಡನ್ನಾದರೂ ಗೌರವಿಸಿ. ಕಲೆಯನ್ನು ಪ್ರೀತಿಸಿ. ನಾವು ಹಾಡುವ ಹಾಡು ಜನರ ಹೃದಯವನ್ನು ಗೆಲ್ಲಬೇಕು. ಅದು ಇತಿಹಾಸದ ಭಾಗವಾಗಬೇಕು. ಕಲಿಯುವುದನ್ನು ನಾನು ನಿಲ್ಲಿಸುವುದಿಲ್ಲ. ಜೀವನದಲ್ಲಿ ಸಂತೃಪ್ತತೆಯಿಂದ ಇದ್ದೇನೆಂದುಕೊಳ್ಳಬೇಕು. ನಿಮ್ಮ ವೃತ್ತಿಯನ್ನು ಅನುಸರಿಸಿ. ಮನಸ್ಸಿನಲ್ಲಿರುವ, ಹೃದಯದಲ್ಲಿರುವ ಗೀತೆಯನ್ನು ಹಾಡಿ. ನಮ್ಮ ವೃತ್ತಿಯಲ್ಲಿರುವ ಹಿರಿಯರಿಂದ ನಾನು ಅದನ್ನೇ ಕಲಿತುಕೊಂಡಿದ್ದೇನೆಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos