ಇದೋ ನೋಡಿ ಪ್ರಿಯಾ ಸುದೀಪ್ ಕೊಟ್ಟ ಯುಗಾದಿಯ ಸರ್ ಪ್ರೈಜ್ ಗಿಫ್ಟ್!
ಕಳೆದ ಕೆಲ ದಿನಗಳ ಹಿಂದೆ ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ ಪ್ರೈಜ್ ಗಿಫ್ಟ್ ಕಾದಿದೆ ಎಂದು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡುವ ಮೂಲಕ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದರು.
ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ ಪ್ರೈಜ್ ಗಿಫ್ಟ್ ಕಾದಿದೆ ಎಂದು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡುವ ಮೂಲಕ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದರು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಪ್ರಿಯಾ ಸುದೀಪ್ ತಮ್ಮ ಮಾತಿನಂತೆ ಸರ್ ಪ್ರೈಜ್ ಗಿಫ್ಟ್ ನೀಡಿದ್ದಾರೆ.
ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿಚ್ಚ ಕ್ರಿಯೇಷನ್ಸ್ ಅಧಿಕೃತ ಯುಟ್ಯೂಬ್ ಚಾನಲ್ ಅನ್ನು ಅನಾವರಣಗೊಳಿಸಿದ್ದಾರೆ.
"ಕಿಚ್ಚ ಸುದೀಪ್ ಅವರ ಎಲ್ಲಾ ಸ್ನೇಹಿತರಿಗೆ ನಾನಿಂದು ಯುಗಾದಿಯ ಉಡುಗೊರೆ ನಿಡುತ್ತಿದ್ದೇನೆ, ಸುದೀಪ್ ಅವರನ್ನು ಇನ್ನಷ್ಟು ನಿಮ್ಮ ಹತ್ತಿರಕ್ಕೆ ತರುವುದಕ್ಕಾಗಿ ಕಿಚ್ಚ ಕ್ರಿಯೇಷನ್ಸ್ ಅಧಿಕೃತ ಯುಟ್ಯೂಬ್ ಚಾನಲ್ ಇಂದು ಪ್ರಾರಂಭವಾಗಿದೆ. ಇದಕ್ಕೆ ಸಬ್ ಸಕ್ರೈಬ್ ಆಗಿರಿ, ಕಿಚ್ಚ ಅಂದ್ರೆ ಕೃಷ್ಣ ತಾನೆ?" ವಿಡಿಯೋ ಜತೆಗೆ ಟ್ವೀಟ್ ಮಾಡಿ ಪ್ರುಯಾ ಸುದೀಪ್ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಕಿಚ್ಚ ತನ್ನ ಪತ್ನಿಯನ್ನು ಅಭಿನಂದಿಸಿದ್ದಲ್ಲದೆ ಅಭಿಮಾನಿಗಳಿಗೆ "ವ್ಚಾನಲ್ ನನ್ನ ಬಗ್ಗೆ ಮಾತ್ರವೇ ಅಲ್ಲ, ಇಲ್ಲಿ ಹೊಸ ಪ್ರತಿಭೆಗಳಿಗೆ ಸಹ ಅವಕಾಶವಿರಲಿದೆ" ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.
Tnx to th entire team for this love. U all have worked from heart n I can see that.
Tnx @iampriya06 for launching kicchaCreatiions YouTube channel.
This channel jus isn't about me, it's also a platform to unleash young n new talents... Mch luv n Huggs
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.