ಶಿವಣ್ಣ, ಸುದೀಪ್ 
ಸಿನಿಮಾ ಸುದ್ದಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಶಿವರಾಜ್ ಕುಮಾರ್ vs ಸುದೀಪ್ ಬಾಕ್ಸ್ ಆಫೀಸ್ ಫೈಟ್!

ಪಿ. ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಅಭಿಯನದ ಆನಂದ್ ಮತ್ತು ಕೃಷ್ಣ ನಿರ್ದೇಶನದ ಸುದೀಪ್ ಅಭಿಯನದ ಪೈಲ್ವಾನ್ ಎರಡು ಚಿತ್ರಗಳು ಆಗಸ್ಟ್ 9 ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಬರುತ್ತಿವೆ.

ಇತ್ತೀಚಿಗೆ ಪ್ರೇಮ್ ನಿರ್ದೇಶನದ ವಿಲಾನ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಇದೀಗ ಬಾಕ್ಸ್ ಆಫೀಸ್ ನಲ್ಲಿ ಪರಸ್ಪರ ಎದುರಾಗುತ್ತಿದ್ದಾರೆ.

ಇದಕ್ಕೆ ಕಾರಣವೇನೆಂದರೆ ಪಿ. ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಅಭಿಯನದ ಆನಂದ್ ಮತ್ತು ಕೃಷ್ಣ ನಿರ್ದೇಶನದ ಸುದೀಪ್ ಅಭಿಯನದ ಪೈಲ್ವಾನ್ ಎರಡು ಚಿತ್ರಗಳು ಆಗಸ್ಟ್ 9 ರಂದು ಅಂದರೆ ವರಮಹಾಲಕ್ಷ್ಮಿ  ಹಬ್ಬದಂದು ತೆರೆ ಮೇಲೆ ಬರುತ್ತಿವೆ.

ಡಿಸೆಂಬರ್ ನಲ್ಲಿ ಮುಹೂರ್ತ ಆಗಿರುವ  ಆನಂದ್  ಚಿತ್ರವನ್ನು ಆಗಸ್ಟ್ 9 ರಂದು ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕ ಯೋಗಿ ದ್ವಾರಕೀಶ್ ನಿರ್ಧರಿಸಿದ್ದರು. ಆದರೆ, ಇದೀಗ ಕೃಷ್ಣ ಕೂಡಾ ಅದೇ ದಿನದಂದು ಪೈಲ್ವಾನ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಯುಗಾದಿ ದಿನದಂದು ಪೈಲ್ವಾನ ಬಿಡುಗಡೆಯ ದಿನವನ್ನು ನಿರ್ದೇಶಕರು ಟ್ವಿಟರ್ ಮೂಲಕ ಘೋಷಿಸಿದ್ದಾರೆ.

ಪೈಲ್ವಾನ್ ಚಿತ್ರದಲ್ಲಿ ಸುದೀಪ್  ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕಾರ್ಯ ನಡೆಯುತ್ತಿದೆ.  ಆಕಾಂಕ್ಷ ಸಿಂಗ್ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್ ಮತ್ತಿತರ ತಾರಾಬಳಗವಿದೆ. ಹಿಂದಿ, ಭೋಜ್ ಪುರಿ, ಮರಾಠಿ ಸೇರಿದಂತೆ ಹಲವು ಚಿತ್ರದಲ್ಲಿ ಈ ಚಿತ್ರ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

ಶಿವಣ್ಣ ಅಭಿನಯದ ಆನಂದ್  ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ 52ನೇ ಚಿತ್ರವಾಗಿದೆ. ಶಿವಲಿಂಗ ನಂತರ ಪಿ. ವಾಸು ಜೊತೆಗೆ ಎರಡನೇ ಬಾರಿಗೆ ಶಿವಣ್ಣ ಜೊತೆಯಾಗಿದ್ದಾರೆ. ರಚಿತರಾಮ್ ನಾಯಕಿಯಾಗಿದ್ದು, ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶಿವಣ್ಣ ಹಾಗೂ ಸುದೀಪ್  ಅಭಿಯನದ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್ ನಲ್ಲಿ  ಕ್ಲಾಸ್ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಉಭಯ ನಾಯಕರ ಅಭಿಮಾನಿಗಳಲ್ಲಿ  ತೀವ್ರ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT