ಸಿನಿಮಾ ಸುದ್ದಿ

'ನೈಟ್ ಔಟ್ 'ಮೂಲಕ ನಿರ್ದೇಶಕರಾದ ರಾಕೇಶ್ ಅಡಿಗ

Nagaraja AB

ರಾಕೇಶ್ ಅಡಿಗ  ಚೊಚ್ಚಲ ನಿರ್ದೇಶನದ ನೈಟ್ ಔಟ್  ಚಿತ್ರ ತೆರೆಗೆ ಬರಲು ಸಜ್ಜಾಗಿದೆ. 10 ವರ್ಷಗಳ ಕಾಲ ಹಲವು ಚಿತ್ರಗಳಲ್ಲಿ ಅಭಿನಯದ ಅನುಭವ ಹೊಂದಿರುವ ರಾಕೇಶ್ ಅಡಿಗ ಇದೀಗ ನೈಟ್ ಔಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಎಸ್ ಎಸ್ ಎಲ್ ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೆ 2001ರಲ್ಲಿ ಸಹಾಯಕ ನಿರ್ದೇಶನಾಗಿ ಕೆಲಸ ಮಾಡಿದ್ದು,ಚಿತ್ರರಂಗದಲ್ಲಿರುವ ಕೆಲವರಿಗೆ ನಿರ್ದೇಶನದಲ್ಲಿ ನನ್ನಗೆ ಆಸಕ್ತಿ ಇರುವುದು ಗೊತಿತ್ತು. 2007ರಲ್ಲಿ ಬಿಡುಗಡೆಯಾದ ಅಲ್ಬಂ ಅರ್ಬನ್ ಲ್ಯಾಡ್ಸ್  ಚಿತ್ರ ನಿರ್ಮಾಪಕರ ಗಮನ ಸೆಳೆದಿತ್ತು. ಜೋಷ್ ಚಿತ್ರ ನಂತರ 10 ವರ್ಷದ ನಂತರ ನೈಟ್ ಔಟ್ ಚಿತ್ರ ಬರುತ್ತಿರುವುದಾಗಿ ರಾಕೇಶ್ ಅಡಿಗ ಹೇಳಿದ್ದಾರೆ.

ಭರತ್, ಅಕ್ಷಯ್ ಕುಮಾರ್, ಮತ್ತು ಶ್ರುತಿ ಗೊರಾಡಿಯಾ ಅಭಿನಯಿಸಿರುವ ಈ ಚಿತ್ರವನ್ನು ಅಮೆರಿಕಾದ ವೈದ್ಯ ನವೀನ್ ಕೃಷ್ಣಾ ಎಂಬವರು ನಿರ್ಮಿಸಿದ್ದು, ರಾಕೇಶ್ ಅಡಿಗ ಅವರೇ ಚಿತ್ರಕಥೆ ಬರೆದಿದ್ದು, ನಿರ್ದೇಶನ ಮಾಡಿದ್ದಾರೆ.

ಸಮೀರ್ ಕುಲಕರ್ಣೀ ಸಂಗೀತ ಸಂಯೋಜಿಸಿದ್ದು, ಅರುಣ್ ಅಲೆಕ್ಸಾಂಡರ್ ಅವರ ಛಾಯಾಗ್ರಾಹಣವಿದೆ ನೈಜ ಜೀವನಾಧಾರಿತ ಕಥೆಯಾಗಿದೆ. ಸಿನಿಮಾದಲ್ಲಿ ಬೇರೆ ರೀತಿಯ ಸಂದೇಶ ನೀಡುವ ಉದ್ದೇಶವಿಲ್ಲ. ಇದು ಸಂಪೂರ್ಣ ಹಾಸ್ಯದೊಂದಿಗೆ ಸಂಪೂರ್ಣ ಮನರಂಜನಾತ್ಮಕ ಚಿತ್ರವಾಗಿದೆ ಎಂದು ರಾಕೇಶ್ ಅಡಿಗ ತಿಳಿಸಿದ್ದಾರೆ

13 ಚಿತ್ರಗಳಲ್ಲಿ ಅಭಿನಯಿಸಿರುವುದರಿಂದ ಸಿನಿಮಾ ರಂಗದ ಬಗ್ಗೆ ಗೊತ್ತಿದೆ. ಶಿವಮಣಿ ಸೇರಿದಂತೆ ಹಲವು ನಿರ್ದೇಶಕರಿಂದ ಕೆಲವೊಂದು ಸಲಹೆ ಪಡೆದಿದ್ದು, ನೈಟ್  ಔಟ್ ಸಿನಿಮಾದಿಂದ ಸಿನಿಮಾ ಭಾಷೆ ಕಲಿತಿರುವುದಾಗಿ ರಾಕೇಶ್ ಅಡಿಗ ಹೇಳಿದ್ದಾರೆ.

SCROLL FOR NEXT