ಅಭಿಷೇಕ್ ಅಂಬರೀಷ್ ನಟನೆಯ ಚೊಚ್ಚಲ ಸಿನಿಮಾ ಅಮರ್ ಥಿಯೇಟರ್ ಗಳಲ್ಲಿ ಅಬ್ಬರಿಸಲು ಸಿದ್ದವಾಗಿದೆ, ಇದೇ ವೇಳೆ ಹಲವು ನಿರ್ದೇಶಕರು ಅಭಿಷೇಕ್ ಎರಡನೇ ಸಿನಿಮಾಗಾಗಿ ಮುಂದೆ ಬಂದಿದ್ದಾರೆ.
ಅಭಿಷೇಕ್ ಎರಡನೇ ಸಿನಿಮಾ ಯಾರು ನಿರ್ದೇಶಿಸರುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ, ಹಲವು ನಿರ್ದೇಶಕರುಗಳ ಹೆಸರು ಕೇಳಿ ಬಂದಿದೆ, ನಟ ಯಶ್ ಅಭಿನಯದ ಸಂತು ಸ್ಟ್ರೈಟ್ ಪಾರ್ವರ್ಡ್ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ರಾವ್ ಅಭಿಯ ಮುಂದಿನ ಸಿನಿಮಾದ ನಿರ್ದೇಶಕ ಎಂದು ಹೇಳಲಾಗುತ್ತಿದೆ,
ಅಭಿಗಾಗಿ ಮಹೇಶ್ ರಾವ್ ಉತ್ತಮ ಕಥೆ ಬರೆಯಲು ಸಮಯ ಕೇಳಿದ್ದಾರೆ, ಅಭಿಷೇಕ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ, ಪ್ರೊಡಕ್ಷನ್ ಹೌಸ್ ಯಾವುದು ಎಂದು ನಿರ್ಧಾರವಾದ ಮೇಲೆ ಅಧಿಕೃತವಾಗಿ ಪ್ರಕಟಿಸಲಾಗುವುದು, ಬಹಶಃ ಲೋಕಸಭೆ ಚುನಾವಣೆ ನಂತರ ಸಿನಿಮಾದ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಚಿತ್ರದಲ್ಲಿ ಅಭಿಷೇಕ್ ಪಾತ್ರ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ,
ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಅಭಿಷೇಕ್ ಗೌಡ ನಟನೆಯ ಮೊದಲ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸಿನಿಮಾ ತಂಡ ಮೊದಜಲ ಹಾಡನ್ನು ರಿಲೀಸ್ ಮಾಡಿದೆ.