ಗೋಲ್ಡನ್ ಸ್ಟಾರ್ ಗಣೇಶ್, ವಿಹಾನ್ 
ಸಿನಿಮಾ ಸುದ್ದಿ

ಬಣ್ಣದ ಲೋಕಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಎಂಟ್ರಿ

‘ಮುಂಗಾರು ಮಳೆ’, ‘ಚೆಲ್ಲಾಟ’, ‘ಚೆಲುವಿನ ಚಿತ್ತಾರ’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿ, ಪ್ರೇಕ್ಷಕರ ಮನಗೆದ್ದಿರುವ ಗೋಲ್ಡನ್ ಸ್ಟಾರ್...

ಬೆಂಗಳೂರು: ‘ಮುಂಗಾರು ಮಳೆ’, ‘ಚೆಲ್ಲಾಟ’, ‘ಚೆಲುವಿನ ಚಿತ್ತಾರ’ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿ, ಪ್ರೇಕ್ಷಕರ ಮನಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ಪುತ್ರ ವಿಹಾನ್ ನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಂಭ್ರಮದಲ್ಲಿದ್ದಾರೆ. 
‘ಚಮಕ್’ ಚಿತ್ರದ ಮೂಲಕ ಈಗಾಗಲೇ ಪುತ್ರಿ ಚಾರಿತ್ರ್ಯಾಳನ್ನು ಚಿತ್ರರಂಗಕ್ಕೆ ಪರಿಚಯಿಸಿರುವ ಗಣೇಶ್, ಇದೀಗ ‘ಗೀತಾ’ ಚಿತ್ರದ ಮೂಲಕ ಮಗನನ್ನು ಕರೆತರುತ್ತಿದ್ದಾರೆ. 
ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಅರುಣ್ ನಟಿಸಲಿದ್ದಾರೆ. ಇದೇ ಚಿತ್ರದಲ್ಲಿ ವಿಹಾನ್ ಗೆಸ್ಟ್ ರೋಲ್ ನಲ್ಲಿ ಮಿಂಚಲಿದ್ದಾರಂತೆ. ಕ್ಯಾಮರಾಗೆ ಮಗ ಪೋಸ್ ನೀಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಗಣೇಶ್ ಶೇರ್ ಮಾಡಿದ್ದಾರೆ. 
ಖಾಸಗಿ ಚಾನಲ್ ಗಳಲ್ಲಿ ನಿರೂಪಕರಾಗಿ, ನಂತರ ಚಂದನವನದ ಚಮಕ್ ನಾಯಕನಾಗಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಗಣೇಶ್, ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿ ಆನಂದಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT